SHIVAMOGGA LIVE NEWS | 23 FEBRUARY 2024
SHIMOGA : ಕೈಗಾರಿಕಾ ವಸಾಹತುವಿಗೆ 2500 ಕೆವಿ ವಿದ್ಯುತ್ ಪೂರೈಕೆ ಜೋಡಿ ಮಾರ್ಗಗಳನ್ನು ಅಳವಡಿಸಲಾಗಿದೆ. ಫೆ.23ರ ನಂತರ ಯಾವುದೆ ಸಂದರ್ಭ ಈ ಮಾರ್ಗವನ್ನು ಚಾಲನೆಗೊಳಿಸಲಾಗುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಗುಂಡಿ ಅಗೆಯುವುದು, ಕಂಬ ಹತ್ತುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ ಅವಘಡಗಳು ಸಂಭವಿಸಿದರೆ ಮೆಸ್ಕಾಂ ಹೊಣೆಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
![]() |
ಸಿದ್ಲಿಪುರದಲ್ಲಿ ಕೆಎಸ್‍ಎಸ್‍ಐಡಿಸಿಯ ಕೈಗಾರಿಕೆ ವಸಾಹತು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಕುಂಸಿ ವಿದ್ಯುತ್ ವಿತರಣಾ ಕೇಂದ್ರದಿಂದ 8 ಕಿ.ಮೀ ಭೂಗತ ಕೇಬಲ್, ಮುದ್ದಿನಕೊಪ್ಪ ಕ್ರಾಸ್‌ನಿಂದ ಕೈಗಾರಿಕಾ ವಸಾಹತುವರೆಗೆ ಓವರ್ ಹೆಡ್ ಮಾರ್ಗವಾಗಿ ವಿದ್ಯುತ್ ಲೈನ್ ಹಾಕಲಾಗಿದೆ. ಫೆ.23ರಂದು ಅಥವಾ ನಂತರದ ದಿನಗಳಲ್ಲಿ ಯಾವುದೆ ಸಂದರ್ಭ ಈ ಜೋಡಿ ಮಾರ್ಗವನ್ನು ಚಾಲನೆಗೊಳಿಸಬಹುದಾಗಿದೆ.
ಈ ಮಾರ್ಗದಲ್ಲಿ 11 ಕೆವಿ ಭೂಗತ ಎಂದು ಬರೆದಿರುವ ಕಲ್ಲುಗಳನ್ನು ನೆಡಲಾಗಿದೆ. ಭೂಗತ ಕೇಬಲ್ ಅಳವಡಿಸಿರುವ ಜಾಗದಲ್ಲಿ ಗುಂಡಿ ತೆಗೆಯುವುದು ಮತ್ತು ಕಂಬ ಹತ್ತುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ ಅವಘಡ ಸಂಭವಿಸಿದರೆ ನಿಯಮ ಉಲ್ಲಂಘಿಸಿದವರೆ ಹೊಣೆಯಾಗಲಿದ್ದಾರೆ. ಕೇಬಲ್‍ಗೆ ಹಾನಿಯಾದಲ್ಲಿ ಅದರ ರಿಪೇರಿ, ಹೊಸ ಕೇಬಲ್‍ನ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಈ ಪ್ರದೇಶಗಳಲ್ಲಿ ಇತರೆ ಇಲಾಖೆಗಳು ಅಥವಾ ಸಾರ್ವಜನಿಕರು ಕೆಲಸ ಮಾಡಬೇಕಾದಲ್ಲಿ ಮೆಸ್ಕಾಂ ವತಿಯಿಂದ ನಿರಾಕ್ಷೇಪಣ ಪತ್ರ ಪಡೆದು ಅವರ ಸಮ್ಮುಖದಲ್ಲಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ ಎಂದು ಕುಂಸಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಇದನ್ನೂ ಓದಿ – ಮಲೆನಾಡ ಸೊಗಡಿನ ‘ಕೆರೆಬೇಟೆ’ ಸಿನಿಮಾದ ಟ್ರೇಲರ್ ರಿಲೀಸ್, ತೀರ್ಥಹಳ್ಳಿಯ ಗೌರಿಶಂಕರ್ ಹೀರೋ, ಇಲ್ಲಿದೆ ಟ್ರೇಲರ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200