ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021
ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನಿತ್ ರಾಜ್ ಕುಮಾರ್ ಅವರು ಇವತ್ತು ಭೇಟಿ ನೀಡಿದ್ದಾರೆ. ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ಅವರು ಬಿಡಾರಕ್ಕೆ ಬಂದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪವರ್ ಸ್ಟಾರ್ ಅಭಿಮಾನಿಗಳು ಆನೆ ಬಿಡಾರದ ಬಳಿ ಸೇರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಧ್ಯಾಹ್ನ ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನಿತ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಸಾಕ್ಷ್ಯಚಿತ್ರದ ಚಿತ್ರೀಕರಣದ ಸಲುವಾಗಿ ಅವರು ಬಿಡಾರಕ್ಕೆ ಬಂದಿದ್ದಾರೆ. ಬಿಡಾರದ ಕ್ರಾಲ್ ಪ್ರದೇಶದಲ್ಲಿ ಚಿತ್ರೀಕರಣ ಕಾರ್ಯ ನಡೆಸಲಾಯಿತು.
ಜನರ ಪ್ರವೇಶ ನಿಷಿದ್ಧ
ಚಿತ್ರೀಕರಣ ನಡೆಯುತ್ತಿದ್ದ ಕಾರಣಕ್ಕೆ ಕ್ರಾಲ್ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅರಣ್ಯಾಧಿಕಾರಿಗಳು, ಬಿಡಾರದ ಸಿಬ್ಬಂದಿಗಳು ಮತ್ತು ಚಿತ್ರೀಕರಣದ ತಂಡಕ್ಕೆ ಮಾತ್ರ ಕ್ರಾಲ್ ಒಳಗೆ ಬಿಡಲಾಯಿತು.
ಅಭಿಮಾನಿಗಳ ಭೇಟಿಯಾದ ಅಪ್ಪು
ಇನ್ನು, ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ನಟ ಪುನಿತ್ ರಾಜ್ ಕುಮಾರ್ ಅವರು ಕ್ರಾಲ್ ಪ್ರದೇಶದಿಂದ ಹೊರಗೆ ಬಂದು ಅಭಿಮಾನಿಗಳನ್ನು ಭೇಟಿಯಾದರು. ಅಭಿಮಾನಿಗಳಿಗೆ ಕೈ ಮುಗಿದ ಪುನಿತ್ ರಾಜ್ ಕುಮಾರ್, ಫೋಟೋ ಕ್ಲಿಕ್ಕಿಸಿಕೊಂಡರು.
ಜಲಾಶಯಕ್ಕೆ ಪುನಿತ್ ಭೇಟಿ
ಡಾಕ್ಯೂಮೆಂಟರಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಪುನಿತ್ ರಾಜ್ ಕುಮಾರ್ ಅವರು ಗಾಜನೂರಿನ ತುಂಗಾ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ವೇಳೆಗೆ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿನ ವೈಭವ ಕಣ್ತುಂಬಿಕೊಳ್ಳಲಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200