ರೈತನ ಮನೆ ಮುಂಭಾಗ ಇದ್ದ ರೋಟೋವೇಟರ್‌ ನಾಪತ್ತೆ

ಶಿವಮೊಗ್ಗ: ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಮನೆಯ ಮುಂಭಾಗ ಇರಿಸಿದ್ದ ಸುಮಾರು ₹75 ಸಾವಿರ ಮೌಲ್ಯದ ಶಕ್ತಿಮಾನ್ ಕಂಪನಿಯ ರೋಟೋವೇಟರ್ ಕಳ್ಳತನವಾಗಿದೆ.➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಬೇಡಕೇರಿ ಹಾರನಹಳ್ಳಿ ಗ್ರಾಮದ ನಿವಾಸಿ ಹೇಮಣ್ಣ  ಎಂಬುವವರಿಗೆ ಸೇರಿದ ರೋಟವೇಟರ್‌ ನಾಪತ್ತೆಯಾಗಿದೆ. ರೈತ ಹೇಮಣ್ಣ ಅವರು ಸಹಾಯಧನ ಹಾಗೂ ಸಾಲ ಮಾಡಿ ರೋಟೋವೇಟರ್ ಖರೀದಿಸಿದ್ದರು. ಅದನ್ನು ತಮ್ಮ ಮನೆಯ ಮುಂಭಾಗದ ಕಾಳಮ್ಮ ದೇವಸ್ಥಾನದ ಆವರಣದಲ್ಲಿ ಇರಿಸಿದ್ದರು. ಜುಲೈ 11ರ ರಾತ್ರಿ ವೇಳೆ ಕಳ್ಳರು ಅದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Kumsi-Police-Station-Shimoga