SHIVAMOGGA LIVE NEWS | 26 FEBRURARY 2023
SHIMOGA : ವಿಮಾನ ನಿಲ್ದಾಣ (Airport) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಗೇಟ್ ಮುಂದೆಯೇ ಸೆಲ್ಫಿ (Selfie) ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ವಿಮಾನ ನಿಲ್ದಾಣ ಗೇಟ್ ಮುಂದೆ ಜಾತ್ರೆ ವಾತಾವರಣ ನಿರ್ಮಾಣವಾಗಿದೆ.
ಗೇಟ್ ಬಳಿ ಫೋಟೊ, ಸೆಲ್ಫಿ
ವೀಕೆಂಡ್ ಹಿನ್ನೆಲೆ ಇಂದು ಜನರು ವಿಮಾನ ನಿಲ್ದಾಣ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಕುಟುಂಬ, ಸ್ನೇಹಿತರ ಜೊತೆಗೆ ಹಲವರು ವಿಮಾನ ನಿಲ್ದಾಣದ ಬಳಿ ಬಂದಿದ್ದಾರೆ. ಬಿಗಿ ಭದ್ರತೆ ಇರುವುದರಿಂದ ಜನರನ್ನು ವಿಮಾನ ನಿಲ್ದಾಣದ ಗೇಟಿನಿಂದ ಒಳಗೆ ಬಿಡುತ್ತಿಲ್ಲ. ನಿರಾಶರಾಗದ ಜನರು ಗೇಟ್ ಮುಂದೆಯೇ ನಿಂತು ಸೆಲ್ಫಿ (Selfie) ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಾತ್ರೆಯ ವಾತಾವರಣ
ವಿಮಾನ ನಿಲ್ದಾಣಕ್ಕೆ ಬರುವ ಜನರ ಸಂಖ್ಯೆ ಹೆಚ್ಚುತ್ತಲೆ ಇದೆ. ಇನ್ನು, ವಿವಿಧ ಜಿಲ್ಲೆಗಳಿಂದ ಭದ್ರತೆಗೆ ಆಗಮಿಸಿರುವ ಪೊಲೀಸರು, ಪೆಂಡಾಲ್ ಸೇರಿದಂತೆ ವಿಮಾನ ನಿಲ್ದಾಣ ಕಾಮಗಾರಿ ನಡೆಸಲು ಆಗಮಿಸಿರುವ ಕಾರ್ಮಿಕರಿಂದಾಗಿ ಕಾಚಿನಕಟ್ಟೆ ಬಳಿ ಜನ ಜಂಗುಳಿ ಕಾಣಿಸುತ್ತಿದೆ. ವಿಮಾನ ನಿಲ್ದಾಣದ ಗೇಟ್ ಬಳಿಕ ಜಾತ್ರೆ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ ಈ 3 ದಿನ ಲಾಡ್ಜ್ ರೂಂ ಪಡೆಯಲು ಜಿಲ್ಲಾಧಿಕಾರಿ ಪರ್ಮಿಷನ್ ಬೇಕು, ಕಾರಣವೇನು?
ಅಂಗಡಿ, ಹೊಟೇಲ್ ಗಳಲ್ಲಿ ವ್ಯಾಪಾರ ಜೋರು
ವಿಮಾನ ನಿಲ್ದಾಣ ಉದ್ಘಾಟನೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹೀಗೆ ಬಂದವರು ಅಕ್ಕಪಕ್ಕದ ಅಂಗಡಿ, ಹೊಟೇಲ್ ಗಳಲ್ಲಿ ತಿಂಡಿ, ತಿನಿಸು ಖರೀದಿಸುತ್ತಿದ್ದಾರೆ. ವಿವಿಧ ವಸ್ತುಗಳ ಮಾರಾಟದ ವ್ಯಾನು, ಐಸ್ಕ್ರೀಮ್ ಶಾಪ್ ಅನ್ನು ರಸ್ತೆ ಬದಿಯಲ್ಲೆ ನಿಲ್ಲಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಗೆ 50 ವರ್ಷದ ಹಿಂದೆಯೇ ವಿಮಾನ ಬರುತ್ತಿತ್ತು, ಎಲ್ಲಿ ಲ್ಯಾಂಡ್ ಆಗುತ್ತಿದ್ದವು ಗೊತ್ತಾ?