ಶಿವಮೊಗ್ಗ ತಾಲ್ಲೂಕು ಪಂಚಾಯಿತಿ, ಮೀಸಲಾತಿ ಪ್ರಕಟ, ಯಾವ್ಯಾವ ಕ್ಷೇತ್ರ ಯಾರಿಗೆ ಮೀಸಲಾಗಿದೆ?

ಶಿವಮೊಗ್ಗ: ರಾಜ್ಯ ಸರ್ಕಾರ ತಾಲ್ಲೂಕು ಪಂಚಾಯಿತಿ ಮೀಸಲಾತಿ ಪ್ರಕಟಿಸಿದೆ. ಶಿವಮೊಗ್ಗ ತಾಲ್ಲೂಕಿನ ಯಾವ್ಯಾವ ಕ್ಷೇತ್ರದ ಮೀಸಲಾತಿ ಏನು? ಇಲ್ಲಿದೆ ಡಿಟೇಲ್ಸ್‌

ಗಾಜನೂರು ಸಾಮಾನ್ಯ, ಅಗಸವಳ್ಳಿ ಸಾಮಾನ್ಯ ಮಹಿಳೆ, ಮತ್ತೂರು ಪರಿಶಿಷ್ಟ ಜಾತಿ, ಹಾರನಹಳ್ಳಿ ಹಿಂದುಳಿದ ವರ್ಗ ‘ಬ’ ಮಹಿಳೆ, ರಾಮನಗರ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಕುಂಚೇನಹಳ್ಳಿ ಪರಿಶಿಷ್ಟ ಜಾತಿಗೆ ಮೀಸಲಾಗಿವೆ. ಕೋಟೆಗಂಗೂರು ಮತ್ತು ಹಸೂಡಿ ಪರಿಶಿಷ್ಟ ಜಾತಿ ಮಹಿಳೆ, ಹೊಳಲೂರು ಸಾಮಾನ್ಯ ಮಹಿಳೆ, ಕೊಮ್ಮನಾಳು, ಮೇಲಿನಹನಸವಾಡಿ, ಕೂಡ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ.

Shimoga-News-update

ಸದಾಶಿವಪುರ ಪರಿಶಿಷ್ಟ ಪಂಗಡ ಮಹಿಳೆ, ನಿದಿಗೆ ಸಾಮಾನ್ಯ ಮಹಿಳೆ, ಸೋಗಾನೆ ಸಾಮಾನ್ಯ, ಕುಂಸಿ ಹಿಂದುಳಿದ ವರ್ಗ ‘ಅ’, ಆಯನೂರು ಹಿಂದುಳಿದ ವರ್ಗ ‘ಅ’ ಮಹಿಳೆ, ಮಂಡಘಟ್ಟ ಸಾಮಾನ್ಯ ಮಹಿಳೆ ಹಾಗೂ ತಮ್ಮಡಿಹಳ್ಳಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.