ಆಯನೂರಿನಲ್ಲಿ ಪತ್ರಿಕೆ ಹಂಚುವ ಹುಡುಗನ ಸಮಯ ಪ್ರಜ್ಞೆಗೆ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಆಯನೂರು: ಪತ್ರಿಕೆ ಹಂಚುವ ಬಾಲಕನ ಸಮಯಪ್ರಜ್ಞೆಯಿಂದಾಗಿ ಆಯನೂರಿನಲ್ಲಿ ದೊಡ್ಡ ದುರಂತ (Short Circuit) ತಪ್ಪಿದೆ. ಕಟ್ಟಡವೊಂದರ ಮೀಟರ್‌ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪತ್ರಿಕೆ ಹಂಚಲು ತೆರಳಿದ್ದ ಬಾಲಕ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೂಡಲೆ ಬೆಂಕಿ ನಂದಿಸಿದ್ದು ಭಾರಿ ನಷ್ಟ ತಪ್ಪಿದೆ.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಬಿ.ಹೆಚ್‌.ರಸ್ತೆಯ ಕಟ್ಟಡವೊಂದರ ಮೀಟರ್‌ ಬೋರ್ಡ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ (Short Circuit) ಬೆಂಕಿ ಕಾಣಿಸಿಕೊಂಡಿತ್ತು. ಬೆಳಗ್ಗೆ 6.30ರ ಹೊತ್ತಿಗೆ ಪತ್ರಿಕೆ ಹಾಕಲು ತೆರಳಿದ್ದ ಶ್ರೇಯಸ್‌ ಮಿರಜ್ಕರ್‌ ಎಂಬ ಬಾಲಕ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕೂಡಲೆ ಬೆಂಕಿ ನಂದಿಸಿದ್ದಾರೆ. ಈ ಕಟ್ಟಡದಲ್ಲಿ ಪೇಯಿಂಟ್‌ ಅಂಗಡಿ, ಹಾರ್ಡ್‌ವೇರ್‌ ಶಾಪ್‌, ಬ್ಯಾಂಕ್‌, ಎಟಿಎಂ ಇದೆ. ಸ್ವಲ್ಪ ತಡವಾಗಿದ್ದರು ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಪತ್ರಿಕೆ ಹಂಚುವ ಬಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

Short-Circut-at-Ayanuru-Building-today-morning

ಇದನ್ನೂ ಓದಿ » ಮಳೆಯಾದರು ಶಿವಮೊಗ್ಗದಲ್ಲಿ ತಗ್ಗದ ಧಗೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment