ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 7 ಏಪ್ರಿಲ್ 2022
ಶಿಕ್ಷಕಿಯೊಬ್ಬರ ಮನೆ ಬಾಗಿಲು ತಟ್ಟಿ ಅಶ್ಲೀಲ ಪದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ನಂಜುಂಡ (40) ಎಂಬಾತನ ವಿರುದ್ಧ ಶಿಕ್ಷಕಿ ದೂರು ನೀಡಿದ್ದಾರೆ. ಶಿಕ್ಷಕಿಯ ಸಂಬಂಧಿಯಾಗಿರುವ ನಂಜುಂಡ, ಈಚೆಗೆ ಶಿಕ್ಷಕಿಯನ್ನು ಹಿಂಬಾಲಿಸುವುದು, ಅವರ ಮನೆಯ ಬಾಗಿಲು ತಟ್ಟುವುದನ್ನು ಮಾಡುತ್ತಿದ್ದಾನೆ.
ಶಿಕ್ಷಕಿಯ ಪತಿ ಕಳೆದ ವರ್ಷ ಮೃತಪಟ್ಟಿದ್ದಾರೆ. ಆ ನಂತರ ನಂಜುಂಡ ಈ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಮಾರ್ಚ್ 3ರ ರಾತ್ರಿ ನಂಜುಂಡ ಶಿಕ್ಷಕಿಯ ಮನೆ ಬಾಗಿಲು ತಟ್ಟಿದ್ದಾನೆ. ಹೊರ ಬಂದ ಶಿಕ್ಷಕಿ ನಂಜುಂಡನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಸೇರುತ್ತಿದ್ದ ಹಾಗೆ ನಂಜುಂಡ ಓಡಿ ಹೋಗಿದ್ದಾನೆ.
ನಂಜುಂಡನ ಕಿರುಕುಳದ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200


