ಶಿವಮೊಗ್ಗ ಲೈವ್
ಶಿವಮೊಗ್ಗ: ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟೆಂಪೊ ಟ್ರಾವಲರ್ (Tempo Traveller) ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಕುಂಸಿ – ಚಿಕ್ಕದಾನವಂದಿ ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಬೆಂಗಳೂರಿನ ದೇವನಹಳ್ಳಿ ನಿವಾಸಿಗಳು ಸಿಗಂದೂರು ದೇವಸ್ಥಾನಕ್ಕೆ ತೆರಳುವಾಗ ಅಪಘಾತವಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಈದ್ ಮಿಲಾದ್, ಶಿವಮೊಗ್ಗ ಸಿಟಿಯಲ್ಲಿ ರೂಟ್ ಮಾರ್ಚ್, 3000 ಪೊಲೀಸರಿಂದ ಬಂದೋಬಸ್ತ್, ಹೇಗಿದೆ ಭದ್ರತೆ?
ಬೆಳಗ್ಗೆ 5.30ರ ಹೊತ್ತಿಗೆ ಟೆಂಪೊ ಟ್ರಾವಲರ್ ವಾಹನ ಹೆದ್ದಾರಿಯಲ್ಲಿ ತೆರಳುವಾಗ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ ಎಂದು ಆರೋಪಿಸಲಾಗಿದೆ. ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಟೆಂಪೊ ಟ್ರಾವೆಲರ್ ವಾಹನ, ರಸ್ತೆ ಬದಿಯಲ್ಲಿದ್ದ ನೀಲಗಿರಿ ಮರಗಳಿಗೆ ಡಿಕ್ಕಿ ಹೊಡೆದಿದೆ.
ಈ ಸುದ್ದಿಯನ್ನೂ ಓದಿ
30ಕ್ಕೂ ಹೆಚ್ಚು ಮಾತ್ರೆ ನುಂಗಿದ ಮಹಿಳೆ, ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ, ಆಗಿದ್ದೇನು?

ವಾಹನದಲ್ಲಿದ್ದವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.



ಇದನ್ನೂ ಓದಿ » ತುಂಗಾ ಜಲಾಶಯದ ಹೊರ ಹರಿವು ಏರಿಕೆ, ಇವತ್ತು ಎಷ್ಟಿದೆ?