ಆಯನೂರು ಹತ್ಯೆ ಕೇಸ್‌, ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ? ಸತೀಶನ ಕಾಲಿಗೆ ಗುಂಡು ಹಾರಿಸಿದ್ದೇಕೆ? ಕಂಪ್ಲೀಟ್‌ ಮಾಹಿತಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE | 6 JUNE 2023

SHIMOGA : ಆಯನೂರಿನ ಬಾರ್‌ ಕ್ಯಾಶಿಯರ್‌ ಸಚಿನ್‌ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ (Arrest). ಪ್ರಮುಖ ಆರೋಪಿ ಸತೀಶ್‌ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯು ಸಮೀಪದ ಕಾಡಿನಲ್ಲಿ ಅವಿತುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆಯೆ ದಾಳಿ ನಡೆಸಿದ್ದ.

Ayanuru-Murder-Case-three-arrest

ಮೂವರು ಆರೋಪಿಗಳು ಅರೆಸ್ಟ್‌

ಬಾರ್‌ ಕ್ಯಾಶಿಯರ್‌ ಸಚಿನ್‌ (27) ಹತ್ಯೆ ಪ್ರಕರಣದ ಆರೋಪಿಗಳಾದ ಸತೀಶ್‌, ಅಶೋಕ್‌ ಮತ್ತು ನಿರಂಜನ್‌ ಎಂಬುವವರನ್ನು ಬಂಧಿಸಲಾಗಿದೆ (Arrest). ಇವರೆಲ್ಲ ಆಯನೂರು ಕೋಟೆ ತಾಂಡದವರು. ಘಟನೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಅಶೋಕ್‌ ಮತ್ತು ನಿರಂಜನ್‌ ಮೊದಲು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸತೀಶ್‌ ಮಾತ್ರ ಪ್ರತ್ಯೇಕವಾಗಿದ್ದ.

Bar-Casher-Attacked-Ayanuru-Navarathna-bar

ಗಾಳಿಯಲ್ಲಿ ಒಂದು, ಕಾಲಿಗೆ ಒಂದು ಗುಂಡು

ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸತೀಶ್‌ ಅಡಗಿರುವುದು ಗೊತ್ತಾಗುತ್ತಿದ್ದಂತೆ ಪಿಎಸ್‌ಐ ರಾಜುರೆಡ್ಡಿ, ಸಿಬ್ಬಂದಿ ಶಿವರಾಜ್‌ ಮತ್ತು ಪ್ರವೀಣ್‌ ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸ್‌ ಸಿಬ್ಬಂದಿ ಶಿವರಾಜ್‌ ಮತ್ತು ಪ್ರವೀಣ್‌ ಮೇಲೆ ಸತೀಶ್‌ ಹಲ್ಲೆ ನಡೆಸಿದ್ದಾನೆ. ಇಬ್ಬರನ್ನು ತಳ್ಳಿ ಪಿಎಸ್‌ಐ ರಾಜುರೆಡ್ಡಿ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ.

ಶಿವರಾಜ್‌ ಮೇಲೆ ದಾಳಿಗೆ ಮುಂದಾದಾಗ ಪಿಎಸ್‌ಐ ರಾಜುರೆಡ್ಡಿ ಎಚ್ಚರಿಕೆ ನೀಡುತ್ತಾರೆ. ಆದರೂ ಸಿಬ್ಬಂದಿಗಳನ್ನು ತಳ್ಳಿ ಗಾಯಗೊಳಿಸುತ್ತಾನೆ. ಆಮೇಲೆ ಪಿಎಸ್‌ಐ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪಿಎಸ್‌ಐ ರಾಜುರೆಡ್ಡಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆಮೇಲೆ ಆರೋಪಿ ಸತೀಶ್‌ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ.ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ

Police Fire in a Ayanur incident

ಸಿಬ್ಬಂದಿಗೆ ಉತ್ತಮ ಚಿಕಿತ್ಸೆ

ಇನ್ನು, ಪೊಲೀಸ್‌ ಸಿಬ್ಬಂದಿಗೆ ಗಾಯವಾಗಿರುವ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಅವರು ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ನೀಡಿದ್ದರು. ಗಾಯಾಳು ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.


WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಹತ್ಯೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಇವರ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸತೀಶ್‌ ಇದ್ದ. ಈಗ ನಮ್ಮ ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ. ವೈದ್ಯರು ಮತ್ತು ಗಾಯಾಳು ಸಿಬ್ಬಂದಿಯೊಂದಿಗೆ ಮಾತನಾಡಿದ್ದೇನೆ. ಉತ್ತಮ ಚಿಕಿತ್ಸೆ ನೀಡುವಂತೆ ತಿಳಿಸಿದ್ದೇನೆ.ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ

Kumsi Police injured in Ayanur Incident

ಆಯನೂರಿನ ನವರತ್ನ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಜೂನ್‌ 4ರ ರಾತ್ರಿ ಕ್ಯಾಶಿಯರ್‌ ಸಚಿನ್‌ ಎದೆಗೆ ಚಾಕು ಚುಚ್ಚಿ ಹತ್ಯೆ ಮಾಡಲಾಗಿತ್ತು. ಮದ್ಯ ಸೇವನೆ ಮಾಡುತ್ತಿದ್ದ ಮೂವರಿಗೆ, ಬಾರ್‌ ಬಂದ್‌ ಮಾಡುವ ಸಮಯವಾಗಿದೆ ಹೊರಡಿ ಎಂದಿದ್ದಕ್ಕೆ ಜಗಳ ತೆಗೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಎದುರಲ್ಲೆ ಘಟನೆ ಸಂಭವಿಸಿತ್ತು. ಇದು ತೀವ್ರ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ – ಆಯನೂರಿನಲ್ಲಿ ಮಧ್ಯರಾತ್ರಿ ಕೊಲೆ, ಎದೆಗೆ ಡ್ರ್ಯಾಗರ್‌ ಚುಚ್ಚಿ ವ್ಯಕ್ತಿ ಹತ್ಯೆ, ಕಾರಣವೇನು? ಹೇಗಾಯ್ತು ಘಟನೆ?

ಘಟನೆ ಕುರಿತು ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Shivamogga Live Total Reach

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment