ತ್ಯಾವರೆಕೊಪ್ಪ ಮೃಗಾಲಯದ ಮತ್ತೊಂದು ಹುಲಿ ಸಾವು, ಈ ವರ್ಷದಲ್ಲಿ ಎರಡನೇ ಟೈಗರ್‌ ಕೊನೆಯುಸಿರು

ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಏಕೈಕ ಗಂಡು ಹುಲಿ (Tiger) ವಿಜಯ್‌ ಇಂದು ಕೊನೆಯುಸಿರೆಳೆದಿದೆ ಎಂದು ಹುಲಿ ಮತ್ತು ಸಿಂಹಧಾಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಜನಿಸಿದ್ದ ವಿಜಯ್‌ (17), ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಕಳೆದ ಒಂದು ತಿಂಗಳಿಂದ ವಿಜಯ್‌ ನಿಯಮಿತವಾಗಿ ಆಹಾರ ಸೇವಿಸುತ್ತಿರಲಿಲ್ಲ. ಸ್ನಾಯುಗಳಲ್ಲಿ ಸಮಸ್ಯೆ ಉಂಟಾಗಿತ್ತು ಎಂದು ತಿಳಿಸಲಾಗಿದೆ.

tiger-vijay-succumbed-at-Tyavarekoppa
ತ್ಯಾವರೆಕೊಪ್ಪ ಮೃಗಾಲಯದ ಹುಲಿ ವಿಜಯ್‌

ಮೃಗಾಲಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು ವಿಜಯ್‌ ಹುಲಿ. ಇಡೀ ಜೀವನ ಪ್ರಕೃತಿ ಶಿಕ್ಷಣ ಉದ್ದೇಶಕ್ಕೆ ಮೀಸಲಾಗಿತ್ತು. ವಿಜಯ್‌ ಸಾವಿನಿಂದ ಮೃಗಾಲಯಕ್ಕೆ ದೊಡ್ಡ ನಷ್ಟವಾಗಿದೆ. ನಿಯಮಾನುಸಾರ ವಿಜಯ್‌ನ ಅಂತ್ಯಕ್ರಿಯೆ ನೆರವೇರಿಸಾಗುತ್ತದೆ.

ಶಿವಮೊಗ್ಗದಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ

ಅಮರಾಕ್ಷರ, ತ್ಯಾವರೆಕೊಪ್ಪ ಮೃಗಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ

tiger-vijay-succumbed-at-Tyavarekoppa

ಮೃಗಾಲಯದಲ್ಲಿ ಗಂಡು ಹುಲಿಗಳೇ ಇಲ್ಲ

ವಿಜಯ್‌ನ ಸಾವಿನಿಂದಾಗಿ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಿದೆ. ಅಲ್ಲದೆ ಗಂಡು ಹುಲಿಗಳೇ ಇಲ್ಲವಾಗಿವೆ. ಸದ್ಯ ಮೃಗಾಲಯದಲ್ಲಿ ದಶಮಿ (17), ಸೀತಾ (16), ಪೂರ್ಣಿಮಾ (12) ಮತ್ತು ನಿವೇದಿತಾ (12) ಹುಲಿಗಳಿವೆ.

Parishrama advt 10 feb 2025 (1)
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

ಎರಡು ತಿಂಗಳಲ್ಲಿ ಎರಡನೇ ಹುಲಿ ಸಾವು

ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಈ ವರ್ಷದಲ್ಲಿ ಎರಡನೇ ಹುಲಿ ಕೊನೆಯುಸಿರೆಳೆಯುತ್ತಿದೆ. ಜನವರಿ 8ರಂದು 17 ವರ್ಷದ ಅಂಜನಿ ಎಂಬ ಹುಲಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿತ್ತು. ಈಗ ವಯೋಸಹಜ ಸಮಸ್ಯೆಯಿಂದಾಗಿ ವಿಜಯ್‌ ಕೊನೆಯುಸಿರೆಳೆದಿದೆ.

NATIONAL-PUBLIC-SCHOOL-scaled

ಇದನ್ನೂ ಓದಿ » ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment