ಮೈದುಂಬಿದ ತುಂಗೆ, ಜಲಾಶಯದ ಒಳ ಹರಿವು ಕುಸಿತ, ಹೊರ ಹರವು ಇಳಿಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 JULY 2024

DAM LEVEL : ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ತುಸು ಕಡಿಮೆಯಾದ ಹಿನ್ನೆಲೆ ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು ಪ್ರಮಾಣ ಇಳಿಕೆಯಾಗಿದೆ. ಆದರೂ 21 ಗೇಟ್‌ಗಳ ಮೂಲಕ ಹೊಳೆಗೆ ನೀರು ಹರಿಸಲಾಗುತ್ತಿದೆ.

ತುಂಗಾ ಜಲಾಶಯಕ್ಕೆ ಪ್ರಸ್ತುತ ಒಳ ಹರಿವು 22,540 ಕ್ಯೂಸೆಕ್‌ ದಾಖಲಾಗಿದೆ. 21 ಗೇಟ್‌ಗಳ ಮೂಲಕ 18,529 ಕ್ಯೂಸೆಕ್‌ ನೀರನ್ನು ನೇರವಾಗಿ ಹೊಳೆಗೆ ಹರಿಸಲಾಗುತ್ತಿದೆ. ಪವರ್‌ ಹೌಸ್‌ ಮೂಲಕ 3300 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

TUNGA-DAM-21-CRUST-GATES-OPENED

ಗುರುವಾರ ಅಬ್ಬರಿಸಿದ್ದ ತುಂಗಾ

ತೀರ್ಥಹಳ್ಳಿ ಸೇರಿದಂತೆ ಹಿನ್ನೀರು ಭಾಗದಲ್ಲಿ ಕಳೆದ ಎರಡು ದಿನ ಭಾರಿ ಮಳೆಯಾಗಿದ್ದರಿಂದ ತುಂಗಾ ನದಿ ಮೈದುಂಬಿ ಹರಿದಿತ್ತು. ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ 43 ಸಾವಿರ ಕ್ಯೂಸೆಕ್‌ವರೆಗೆ ಒಳ ಹರಿವು ಇತ್ತು. ಅಷ್ಟೆ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿತ್ತು. ಹಾಗಾಗಿ ಶಿವಮೊಗ್ಗದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿತ್ತು.

ಇದನ್ನೂ ಓದಿ – ತವರು ಮನೆಗೆ ಬಂದಿದ್ದ ಮಹಿಳೆ ನಾಪತ್ತೆ, ಬೆಳಗ್ಗೆ ಬಾವಿಯಲ್ಲಿ ಬಗ್ಗಿ ನೋಡಿದ ಕುಟುಂಬದವರಿಗೆ ಶಾಕ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment