ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸಾಗರ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ (bike) ಡಿಕ್ಕಿ ಹೊಡೆದು 19 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮುದ್ದಿನಕೊಪ್ಪ ಟ್ರೀ ಪಾರ್ಕ್ ಬಳಿ ಘಟನೆ ನಡೆದಿದೆ.
ಚಾಮುಂಡಿಪುರ ಗ್ರಾಮದ ಶರವಣ (19) ಯಮಹಾ ಬೈಕ್‌ನಲ್ಲಿ ಶಿವಮೊಗ್ಗದಿಂದ ಆಯನೂರು ಮಾರ್ಗವಾಗಿ ತೆರಳುತ್ತಿದ್ದರು. ಮುದ್ದಿನಕೊಪ್ಪ ಬಳಿ ಸೂಚನಾ ಫಲಕ ಅಥವಾ ರಿಫ್ಲೆಕ್ಟರ್ ಸ್ಟಿಕ್ಕರ್ ಇಲ್ಲದೆ ರಸ್ತೆಗೆ ಟ್ರಾಕ್ಟರ್ ನಿಲ್ಲಿಸಲಾಗಿತ್ತು. ಟ್ರಾಲಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದು, ಶರವಣನ ಮುಖ ಮತ್ತು ಎದೆಗೆ ಗಂಭೀರ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ.

ಟ್ರಾಕ್ಟರ್ ಚಾಲಕನ ಬೇಜವಾಬ್ದಾರಿತನವೇ ಘಟನೆಗೆ ಕಾರಣ ಎಂದು ಶರವಣ ಅವರ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಲಾಡ್ಜ್‌ನಲ್ಲಿ ಮಹಿಳಾ ಸಿಬ್ಬಂದಿಯನ್ನು ಎಳೆದಾಡಿದ ಬೆಂಗಳೂರು ವ್ಯಕ್ತಿ, ಇತರೆ ಸಿಬ್ಬಂದಿ ಮೇಲೆ ಹಲ್ಲೆ
LATEST NEWS
- ಇನ್ಮುಂದೆ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಮೊಗ್ಗ ಪೊಲೀಸ್, ಏನಿದು?

- ಇವತ್ತು 99 ಸಾವಿರಕ್ಕೆ ಅಡಿಕೆ | 11 ಫೆಬ್ರವರಿ 2026 | ಅಡಿಕೆ ಧಾರಣೆ

- ಬಿಜೆಪಿ ನಾಯಕನಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ ಕಾಂಗ್ರೆಸ್ ಸರ್ಕಾರ, ಕೆಂಡವಾದ ಕೈ ಕಾರ್ಯಕರ್ತರು, ಏನಿದು?

- ಟ್ರಾಕ್ಟರ್ ಚಾಲಕನ ಒಂದು ತಪ್ಪು ನಿರ್ಧಾರಕ್ಕೆ 19 ವರ್ಷದ ಯುವಕ ಸಾವು, ಆಗಿದ್ದೇನು?

- ಶಿವಮೊಗ್ಗದ ಮನೆಯಲ್ಲಿ ಯಾರೂ ಇರಲಿಲ್ಲ, ಮುಂಬೈನಿಂದ ಬಂದಾಗ ಲಾಕರ್ನಲ್ಲಿದ್ದ ಚಿನ್ನಾಭರಣ ಮಾಯ

About The Editor
ನಿತಿನ್ ಆರ್.ಕೈದೊಟ್ಲು





