ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 MARCH 2023
SHIMOGA : ಉದ್ಯೋಗ (job scam) ಕೊಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷ ಲಕ್ಷ ರುಪಾಯಿ ವಂಚನೆ ಮಾಡಿರುವ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರ ವ್ಯಕ್ತಿಗೆ ವಂಚನೆಗೆ ಒಳಗಾಗಿದ್ದಾನೆ.
ಮೊಬೈಲಿಗೆ ಬಂತು ಉದ್ಯೋಗದ ಮೆಸೇಜ್
ಮಾ.3ರಂದು ಯುವಕನ ಟೆಲಿಗ್ರಾಂ ಆ್ಯಪ್ ಗೆ ‘ಕೆಲಸ (job scam) ಕೊಡಲಾಗುತ್ತದೆ. ಅದಕ್ಕೂ ಮೊದಲು ಟಾಸ್ಕ್ ಪೂರೈಸಿ ಹೆಚ್ಚಿನ ಗಳಿಕೆ ಮಾಡಿ’ ಎಂದು ಮೆಸೇಜ್ ಬಂದಿತ್ತು. ಇದನ್ನು ನಂಬಿ, ಮಸೇಜಿನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಮತ್ತೊಂದು ಮೊಬೈಲ್ ನಂಬರ್ ತೋರಿಸಿದ್ದು, ಅದಕ್ಕೆ ಯುವಕ ಟೆಲಿಗ್ರಾಂ ಮೂಲಕ ಮೆಸೇಜ್ ಕಳುಹಿಸಿದ್ದ. ಮೊದಲಿಗೆ 2 ಸಾವಿರ ರೂ. ಮೊತ್ತದ ಟಾಸ್ಕ್ ಪೂರೈಸಿ ಎಂದು ಆ ನಂಬರ್ ನಿಂದ ಮೆಸೇಜ್ ಬಂದಿತ್ತು.
ನಂಬಿಕೆ ಹುಟ್ಟಿಸಲು 2800 ರೂ. ಹಾಕಿದರು
ಯುವಕ ತನ್ನ ಫೋನ್ ಪೇ ಮೂಲಕ 2 ಸಾವಿರ ರೂ. ಹಣ ವರ್ಗಾಯಿಸಿ ಮೊದಲ ಟಾಸ್ಕ್ ಕಂಪ್ಲೀಟ್ ಮಾಡಿದ್ದ. ಸ್ವಲ್ಪ ಹೊತ್ತಿಗೆ ಯುವಕನ ಖಾತೆಗೆ 2800 ರೂ. ಹಣ ಹಿಂತಿರುಗಿ ಬಂದಿತ್ತು. ಇದನ್ನು ನಂಬಿದ ಯುವಕ ಮರುದಿನ ಮುಂದಿನ ಟಾಸ್ಕ್ ಗಳನ್ನು ಕಂಪ್ಲೀಟ್ ಮಾಡಲು ಆರಂಭಿಸಿದ. ಹಂತ ಹಂತವಾಗಿ ಟಾಸ್ಕ್ ನೀಡಿದ್ದು, ಯುವಕ ತನ್ನ ಎರಡು ಬ್ಯಾಂಕ್ ಖಾತೆಗಳಿಂದ 2.60 ಲಕ್ಷ ರೂ. ಹಣವನ್ನು ಟಾಸ್ಕ್ ನೀಡಿದವರ ಖಾತೆಗೆ ವರ್ಗಾಯಿಸಿದ್ದಾನೆ.
ಇದನ್ನೂ ಓದಿ – ಬೈಕ್ ಬಣ್ಣ ಬದಲು, ಸೈಲೆನ್ಸರ್ ಮಾರ್ಪಾಡು, ಯುವಕನಿಗೆ ಕೋರ್ಟ್ ದಂಡ
2.60 ಲಕ್ಷ ರೂ. ಹಣ ಕಳೆದುಕೊಂಡ ಮೇಲೆ ಆತಂಕಗೊಂಡ ಯುವಕ ತನ್ನ ಸ್ನೇಹಿತರಿಗೆ ವಿಚಾರ ತಿಳಿಸಿದ್ದಾನೆ. ವಂಚನೆಗೊಳಗಾಗಿರುವುದು ಆತನ ಅರಿವಿಗೆ ಬಂದಿದೆ. ಘಟನೆ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422