SHIVAMOGGA LIVE | 2 JUNE 2023
HOLEHONNURU : ಗ್ರಾಮಾಂತರ ಪ್ರದೇಶದಲ್ಲಿ ಅಪರಾಧ ತಡೆಗೆ ಪೊಲೀಸ್ ಇಲಾಖೆ ವಿಭಿನ್ನ ಹೆಜ್ಜೆ ಇಟ್ಟಿದೆ. ಪ್ರತಿ ಗ್ರಾಮಕ್ಕೆ ಬೀಟ್ (Beat) ಸಿಬ್ಬಂದಿ ನೇಮಿಸಲಾಗುತ್ತದೆ. ಗ್ರಾಮದ ಯುವಕರು ಪೊಲೀಸರೊಂದಿಗೆ ಬೀಟ್ ನಡೆಸಬಹುದಾಗಿದೆ.➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಡೇಹಳ್ಳಿ ಗ್ರಾಮದ ಅಶೋಕ ನಗರದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜನ ಸಂಪರ್ಕ ಸಭೆ ನಡಸಿದರು. ಈ ವೇಳೆ ಅವರು ಐದು ಪ್ರಮುಖ ಸೂಚನೆ ನೀಡಿದ್ದಾರೆ.
ಸೂಚನೆ 1 – ಪ್ರತೀ ಗ್ರಾಮಗಳಿಗೂ ಬೀಟ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಆಯಾ ಸಬ್ಬಂದಿ ನಿರಂತರವಾಗಿ ತಮ್ಮ ಗ್ರಾಮಕ್ಕೆ ಭೇಟಿ ನೀಡಲಿದ್ದು, ಯಾವಾಗಲೂ ಜನರ ಸಂಪರ್ಕದಲ್ಲಿರುತ್ತಾರೆ. ಅದೇ ರೀತಿ ಜನರು ಕೂಡ ಗ್ರಾಮದ ಬೀಟ್ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿ ಇರಬೇಕು.
ಸೂಚನೆ 2 – ಗ್ರಾಮದಲ್ಲಿ ಅಕ್ರಮ ಚಟುವಟಿಕೆ ಕಂಡಲ್ಲಿ ಕೂಡಲೇ ಬೀಟ್ ಸಿಬ್ಬಂದಿ, ಪಿಎಸ್ಐ, ಠಾಣಾಧಿಕಾರಿಗೆ ಮಾಹಿತಿ ನೀಡಬೇಕು.
ಸೂಚನೆ 3 – ಗ್ರಾಮದಲ್ಲಿರುವ ಯುವಕರನ್ನು ಗುರುತಿಸಿ, 20 ರಿಂದ 30 ಯುವಕರ ಪಡೆ ರಚಿಸಿ, ಬೀಟ್ (Beat) ಸಿಬ್ಬಂದಿಯೊಂದಿಗೆ ಗಸ್ತು ಮಾಡಬೇಕು. ಯಾವದೇ ಅಕ್ರಮ ಚಟುವಟಿ ಕಂಡು ಬಂದಲ್ಲಿ ಅಥವಾ ಯಾವುದೇ ಮಾಹಿತಿ ಇದ್ದಲ್ಲಿ ಕೂಡಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
ಇದನ್ನೂ ಓದಿ – ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಮೊಬೈಲ್ ಮಾಯ, ಸ್ವಲ್ಪ ಹೊತ್ತಿನಲ್ಲೇ ಕಾದಿತ್ತು ಮತ್ತೊಂದು ಶಾಕ್
ಸೂಚನೆ 4 – ಯಾವುದೇ ಸಮಾಜ ಘಾತುಕ ಅಥವಾ ಅಕ್ರಮ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು.
ಸೂಚನೆ 5 – ಯಾವುದೇ ತುರ್ತು ಸಂದರ್ಭದಲ್ಲಿ ERSS – 112 ಸಹಾಯವಾಣಿಗೆ ಕರೆಮಾಡಿ ಪೊಲೀಸ್ ಸಹಾಯ ಪಡೆದುಕೊಳ್ಳಬಹುದು.
ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ, ಯಡೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ