ಮೇಯಲು ಹೋಗಿದ್ದ 38 ಕುರಿಗಳು ದಿಢೀರ್‌ ಸಾವು, ಏನಿದು ಪ್ರಕರಣ?

ಸೊರಬ: ಮೇಯಲು ತೆರಳಿದ್ದ 38 ಕುರಿಗಳು (Sheep) ದಿಢೀರ್‌ ಅಸ್ವಸ್ಥಗೊಂಡು ಸಾವನ್ನಪ್ಪಿವೆ. ಸೊರಬ ಪಟ್ಟಣದ ಬಂಗಾರಪ್ಪ ಸ್ಟೇಡಿಯಂ ಬಳಿ ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಖಡಕಲಾಟ ಗ್ರಾಮದ ಕುರಿಗಾಹಿ ಸುರೇಶ ಬೀರಾ ಅವಡಖಾನ ಅವರಿಗೆ ಸೇರಿರುವ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸ್ವಸ್ಥ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಬುಧವಾರ 12 ಕುರಿಗಳು ಮೃತಪಟ್ಟಿದ್ದು, ಗುರುವಾರ 26 ಕುರಿಗಳು ಸಾವಿಗೀಡಾಗಿವೆ. ಸ್ಥಳಕ್ಕೆ ಪಶು ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿದ್ದು, ವಿಷಪೂರಿತ ಆಹಾರ ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕುರಿಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ.

ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ.‌ ಪ್ರದೀಪ್ ಕುಮಾರ್‌, ಪಶುವೈದ್ಯಕೀಯ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

38-sheep-incident-at-soraba.

ಇದನ್ನೂ ಓದಿ » ವಾಹನ ಡಿಕ್ಕಿಯಾಗಿ ಏಳು ತಿಂಗಳ ಚಿರತೆ ಸಾವು, ಎಲ್ಲಿ?

Prashanth-Loan-Advertisement.

38 Sheep succumbed 

38-sheep-incident-at-soraba.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment