‘ಸಚಿವ ಮಧು ಬಂಗಾರಪ್ಪ ಜನಪ್ರಿಯತೆ ಸಹಿಸದ ಬಿಜೆಪಿಯಿಂದ ಸುಳ್ಳು ಆರೋಪʼ

ಸೊರಬ: ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆವರೆತೆಪ್ಪ ಗ್ರಾಮದ ಅಡಿಕೆ ತೋಟ ಕಡಿತಲೆ ಘಟನೆಗೆ ಬಿಜೆಪಿ ರಾಜಕೀಯ ಬಣ್ಣ ಬಳಿದು ವಿನಾಕಾರಣ ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್ಸಿನ ಮೇಲೆ ಆರೋಪ‌ ಮಾಡುತ್ತಿದೆ ಎಂದು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್ ಆರೋಪಿಸಿದರು. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಬುಧವಾರ ಬ್ಲಾಕ್ ಕಾಂಗ್ರೆಸ್ ಮುಖಂಡರ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಬಿಜೆಪಿ ರಾಜಕೀಯ ಬಣ್ಣ ಬಳಿದು ಸಚಿವ ಮಧು ಬಂಗಾರಪ್ಪ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ದೂರಿದರು.

Soraba-Tevareteppa-Arecanut-Farm

ಸಚಿವ ಮಧು ಬಂಗಾರಪ್ಪ ಅವರ ಜನಪ್ರಿಯತೆಯನ್ನು ಸಹಿಸದೆ ಬಿಜೆಪಿಯವರು ಅಡಿಕೆ ತೋಟ ಕಡಿತಲೆ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಈ ತೆರವು ಕಾರ್ಯಾಚರಣೆಯು ನಿಯಮಾನುಸಾರ ನಡೆದಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದು ಅವರು ಹೇಳಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಸಭೆಯಲ್ಲಿ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಮುಖಂಡರಾದ ಅಣ್ಣಪ್ಪ ಹಾಲಘಟ್ಟ, ಗಣಪತಿ ಹುಲ್ತಿಕೊಪ್ಪ, ಜಯಶೀಲಗೌಡ, ಕೆ.ವಿ. ಗೌಡ, ಸುನೀಲ್ ಗೌಡ, ಪಾಂಡುರಂಗ ಕೊಡಕಣಿ, ಅಶೋಕ ಹೆಗಡೆ, ಫಯಾಜ್ ಸಾಬ್, ನಿಜಲಿಂಗಪ್ಪ, ಪ್ರಭಾಕರ್, ಶಿವಪ್ಪ, ಜಗದೀಶ್ ಕಮನವಳ್ಳಿ, ಬಸವರಾಜ್, ನಾಗಪ್ಪ, ಭಾಸ್ಕರ್, ಶ್ರೀಕಾಂತ್, ರವಿ, ವಿಜಯೇಂದ್ರ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.