ಅಡಿಕೆ, ಬಾಳೆ ಗಿಡಗಳು ನಾಶ, ವೈರ್‌, ಪೈಪ್‌ ಕಳ್ಳತನ, ಏನಿದು ಪ್ರಕರಣ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಆನವಟ್ಟಿ: ಸಮೀಪದ ತತ್ತೂರು-ವಡ್ಡಿಗೇರಿ ಗ್ರಾಮದ ರೈತ ರಮೇಶ ಅವರ ತೋಟದಲ್ಲಿ ಕಿಡಿಗೇಡಿಗಳು ಅಡಿಕೆ ಹಾಗೂ ಬಾಳೆ ಗಿಡಗಳನ್ನು ಬೇರು ಸಹಿತ ಕಿತ್ತು ಎಸೆದು, ತೋಟದ ವಿದ್ಯುತ್ ಪರಿಕರಗಳನ್ನು ಹಾಳು ಮಾಡಿರುವ ಘಟನೆ ನಡೆದಿದೆ.

ರೈತ ರಮೇಶ ಅವರ ತೋಟದಲ್ಲಿದ್ದ ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇದರೊಂದಿಗೆ ತೋಟದ ಕೊಳವೆಬಾವಿಯ ವಿದ್ಯುತ್ ಸಂಪರ್ಕದ ವೈರ್ ಹಾಗೂ ಪೈಪ್‌ಗಳನ್ನು ಕಳ್ಳತನ ಮಾಡಿ, ಸ್ವಿಚ್ ಬೋರ್ಡ್ ಅನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಜಮೀನು ಒತ್ತುವರಿ ವಿಚಾರವಾಗಿ ಈ ಹಿಂದೆಯು ಅಡಿಕೆ ಗಿಡಗಳನ್ನು ಕತ್ತರಿಸಲಾಗಿತ್ತು. ಅವರೇ ಈ ಕೃತ್ಯ ಎಸಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ರಮೇಶ, ಸುಮಾರು ₹1.50 ಲಕ್ಷ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Anavatti-tatturu-farm-land-issue