ಹೋರಿ ಹಬ್ಬದ ವೇಳೆ ಎಲೆಕ್ಟ್ರಿಕ್‌ ಬೈಕ್‌ ನಾಪತ್ತೆ, ಮೂರೂವರೆ ತಿಂಗಳ ಬಳಿಕ ಕೇಸ್‌, ಏನಿದು ಪ್ರಕರಣ?

ಸೊರಬ: ಚಿಕ್ಕಚೌಟಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬ ನೋಡಲು ಬಂದಿದ್ದ ವ್ಯಕ್ತಿಯೊಬ್ಬರ ಎಲೆಕ್ಟ್ರಿಕ್ ಬೈಕ್ (Electric Bike) ಕಳ್ಳತನವಾಗಿದೆ (Theft). ಈ ಸಂಬಂಧ ಬೈಕ್‌ ಮಾಲೀಕ ಮೂರುವರೆ ತಿಂಗಳ ಬಳಿಕ ದೂರು ನೀಡಿದ್ದಾರೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಅನಿಲ್.ಜೆ ಎಂಬುವವರಿಗೆ ಸೇರಿದ ಬೈಕ್‌ ಕಳುವಾಗಿದೆ. ಫೆ.17ರಂದು ಚಿಕ್ಕಚೌಟಿ ಗ್ರಾಮದ ಹೋರಿ ಹಬ್ಬ ವೀಕ್ಷಿಸಲು ತಮ್ಮ ಎಲೆಕ್ಟ್ರಿಕ್ ಬೈಕ್‌ನಲ್ಲಿ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ವಾಪಸ್ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಕಳ್ಳರು (Unknown Accused) ಬೈಕ್‌ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Shivamogga-Police-Jeep

ಫೆಬ್ರವರಿ ತಿಂಗಳಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಮೇ 4 ರಂದು ದೂರು ದಾಖಲಿಸಲಾಗಿದೆ. ಬೈಕ್ ಕಾಣೆಯಾದ ನಂತರ ಮಾಲೀಕರು ಎಲ್ಲಾ ಕಡೆಗಳಲ್ಲಿ ಹುಡುಕಿದರು. ಎಲ್ಲಿಯು ಸಿಗದ ಹಿನ್ನೆಲೆ ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರ ದಾಳಿ, ₹65,000 ಮೌಲ್ಯದ ಮಾದಕ ವಸ್ತು ಸಹಿತ ಒಬ್ಬ ಅರೆಸ್ಟ್‌