ಮನೆ, ಶುಂಠಿ ಹೊಲದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ, ಆರೋಪಿ ಅರೆಸ್ಟ್, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SORABA | ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ ಮನೆ ಮತ್ತು ಶುಂಠಿ ಹೊಲದ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ 300 ಗ್ರಾಂ ಒಣ ಮತ್ತು 25 ಕೆಜಿ ಹಸಿ ಗಾಂಜಾ (GANJA) ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

Ganesh Birthday

ಚಿಟ್ಟೂರು ಗ್ರಾಮದ ನಿಂಗರಾಜ್ ಬಂಧಿತ. ಈತ ಮಾರಾಟ ಮಾಡಲೆಂದು ಮನೆಯಲ್ಲೇ ಒಣ ಗಾಂಜಾ ಸಂಗ್ರಹಿಸಿದ್ದ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿಸಿ ಕ್ಯಾ. ಅಜಿತ್‌ ಕುಮಾರ್ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಿದಾಗ ಮನೆಯಲ್ಲಿ 300 ಗ್ರಾಂ ಒಣ ಗಾಂಜಾ ಪತ್ತೆಯಾಗಿತ್ತು.

ಬಳಿಕ ವಿಚಾರಣೆ ನಡೆಸಿದಾಗ ಶುಂಠಿ ಹೊಲದಲ್ಲೂ ಗಾಂಜಾ (GANJA) ಬೆಳೆದಿರುವುದನ್ನು ಒಪ್ಪಿಕೊಂಡಿದ್ದ. ಆರೋಪಿ ನೀಡಿದ ಮಾಹಿತಿ ಆಧರಿಸಿ ಗ್ರಾಮದಲ್ಲೇ ಇದ್ದ ಶುಂಠಿ ಹೊಲದಲ್ಲಿ ತಪಾಸಣೆ ನಡೆಸಿದಾಗ 8ರಿಂದ 10 ಅಡಿಯ 10, ಐದಾರು ಅಡಿ ಎತ್ತರದ 10 ಗಾಂಜಾ ಗಿಡಗಳು ಪತ್ತೆಯಾಗಿವೆ.

ಸೊರಬ ವಲಯದ ಅಬಕಾರಿ ಇನ್ಸ್ ಪೆಕ್ಟರ್ ಆರ್ ಶ್ರೀನಾಥ್, ಇನ್ಸ್‌ಪೆಕ್ಟರ್‌ ಹಾಲಾ ನಾಯಕ್‌, ಎಎಸ್‌ಐ ಭಾಗ್ಯಲಕ್ಷ್ಮೀ, ಸಿಬ್ಬಂದಿ ರಂಜನ್‌, ರಾಮಪ್ಪ, ಬಾಲಚಂದ್ರ ಗಣಪತಿ, ಮಹಾಂತೇಶ, ದೇವರಾಜ, ಕಂದಾಯ ನಿರೀಕ್ಷಕ ರಮೇಶ್, ಗ್ರಾಮ ಲೆಕ್ಕಾಧಿಕಾರಿ ಆರ್.ವೀರೇಂದ್ರ, ಗ್ರಾಪಂ ಕಾರ್ಯದರ್ಶಿ ಪರಶುರಾಮ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕ್ಲಿಕ್ ಮಾಡಿ ಇದನ್ನೂ ಓದಿ ಮೊಬೈಲ್ ಹೆಚ್ಚು ಬಳಸಬೇಡ ಅಂದಿದ್ದಕ್ಕೆ ನಾಲೆ ಹಾರಿ ಆತ್ಮಹತ್ಯೆ

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 9, 2022

Leave a Comment