ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

number-1-advt-copy-new.webp

ಭದ್ರಾವತಿ: ತರೀಕೆರೆ ರಸ್ತೆ ಬಳಿ ಗುಜರಿಗೆ (scrap yard) ಹಾಕಿದ್ದ ಹಳೆಯ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿ ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಮುಖಂ ಖಾನ್ ಎಂಬುವವರು ಇಲ್ಲಿ ಶೆಡ್ ಹಾಕಿಕೊಂಡು ಗುಜರಿ ವ್ಯಾಪಾರ ನಡೆಸುತ್ತಿದ್ದಾರೆ. ಇದರ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಇವರು ಹಲವು ಹಳೆಯ ವಾಹನಗಳನ್ನು ನಿಲ್ಲಿಸುತ್ತಿದ್ದರು.

Fire-at-Scrape-area-on-Tarikere-road-in-Bhadravathi.

ಘಟನೆಯಲ್ಲಿ ಗುಜರಿಗೆ ಹಾಕಲಾಗಿದ್ದ 2 ಕಾರ್, 1 ಆಟೊ ರಿಕ್ಷಾ ಹಾಗೂ 20 ಬೈಕ್‌ಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಸುಟ್ಟಿರುವ ಗುಜರಿ ವಾಹನಗಳ ಮೌಲ್ಯ ₹8 ಲಕ್ಷ ಎಂದು ಅಂದಾಜಿಸಲಾಗಿದೆ.

ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 7, 2026 at 10:03 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 7, 2026

Leave a Comment