ಮನೆ ಕಿಟಕಿ ಮೇಲಿಟ್ಟಿದ್ದ ಪ್ಲಾಸ್ಟಿಕ್‌ ಬಾಕ್ಸ್‌ ತೆಗೆದ ಮಹಿಳೆಗೆ ದಿಗ್ಭ್ರಮೆ, ಆಗಿದ್ದೇನು?

ಸೊರಬ: ಮನೆಯ ಕಿಟಕಿಯ ಮೇಲೆ ಇಟ್ಟಿದ್ದ 2 ಗ್ರಾಂ ತೂಕದ ಬಂಗಾರದ ಕಿವಿಯೋಲೆ ಬಟನ್ಸ್ ಕಳ್ಳತನವಾಗಿದೆ. ತಾಲೂಕಿನ ಹರೀಶಿ ಸಮೀಪದ ಕೆರೆಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಗ್ರಾಮದ ರಾಜೇಶ್ವರಿ ಎಂಬುವವರು ಮನೆಯ ಹೊರಗೆ ಕೆಲಸ ಮಾಡುತ್ತಿದ್ದಾಗ ಬಲ ಕಿವಿಯ ಬಂಗಾರದ ಕಿವಿಯೋಲೆಯ ಬಟನ್‌ ಕಳಚಿ ಬಿದ್ದಿತ್ತು. ಅವು ಕಳೆದುಹೋಗಬಹುದು ಎಂದು ಬಿಚ್ಚಿ ಪೇಪರ್‌ನಲ್ಲಿ ಸುತ್ತಿ, ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಹಾಕಿ ಬೆಡ್‌ರೂಮ್ ಕಿಟಕಿ ಮೇಲೆ ಇಟ್ಟಿದ್ದರು. ಸಂಜೆ ರಿಪೇರಿ ಮಾಡಿಸಲು ಹೋಗಲು ಬಾಕ್ಸ್ ತೆಗೆದು ನೋಡಿದಾಗ 2 ಗ್ರಾಂ ತೂಕದ ಬಂಗಾರದ ಬಟನ್ಸ್ ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Soraba-Police-Station-in-Shivamogga-District.

ಕಳ್ಳತನವಾಗಿರುವ ಬಟನ್ಸ್‌ಗಳ ಮೌಲ್ಯ ₹30,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.