ಶಿವಮೊಗ್ಗ ಲೈವ್.ಕಾಂ | SORABA NEWS | 5 APRIL 2021
ಸೊರಬದಲ್ಲಿ ಕೆಎಸ್ಆರ್ಟಿಸಿ ವತಿಯಿಂದ ಮೊದಲ ನಗರ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ಅವರು ಚಾಲನೆ ನೀಡಿ, ಬಸ್ಸಿನಲ್ಲೇ ಸಂಚರಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಶಾಸಕ ಕುಮಾರ್ ಬಂಗಾರಪ್ಪ ಅವರು ಬಸ್ಸಿಗೆ ಹಸಿರು ನಿಶಾನೆ ತೋರಿಸಿದರು. ಬಳಿಕ ಮರೂರಿನ ತನಕ ಅವರು ಬಸ್ಸಿನಲ್ಲೇ ಸಂಚರಿಸಿದರು.
ಬಸ್ ರೂಟ್ ಹೇಗಿದೆ?
ರೂಟ್ 1 – ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ರಂಗನಾಥ ಸ್ವಾಮಿ ದೇಗುಲ, ಚರ್ಚ್ ಸ್ಕೂಲ್, ಅಮರ ಜ್ಯೋತಿ ಸರ್ಕಲ್, ಶೆಟ್ಟರ ಕೇರಿ, ಜೇಡಿಗೇರಿ, ಮಾರಿಗುಡಿ ಲಾಸ್ಟ್ ಸ್ಟಾಪ್
ರೂಟ್ 2 – ಸರ್ಕಾರಿ ಆಸ್ಪತ್ರೆಯಿಂದ ರಂಗನಾಥಸ್ವಾಮಿ ದೇಗುಲ, ದಂಡಾವತಿ ಬ್ಲಾಕ್, ಶ್ರೀ ನಾರಾಯಣಗುರು ಸರ್ಕಲ್, ಜಯಂತಿ ಗ್ರಾಮ, ಹಳೆ ಸೊರಬ
ರೂಟ್ 3 – ಸರ್ಕಾರಿ ಆಸ್ಪತ್ರೆಯಿಂದ ಜೂನಿಯರ್ ಕಾಲೇಜು, ಕಾನಕೊಪ್ಪ, ಕೊಡಕಣಿ, ಸೀಗೇಹಳ್ಳಿ
ರೂಟ್ 4 – ಸರ್ಕಾರಿ ಆಸ್ಪತ್ರೆಯಿಂದ ಹಳೇ ಮಾರುಕಟ್ಟೆ, ಜಂಗಿನಕೊಪ್ಪ
ರೂಟ್ 5 – ಸರ್ಕಾರಿ ಆಸ್ಪತ್ರೆಯಿಂದ ಹೌಸಿಂಗ್ ಬೋರ್ಡ್, ನಾಗರಕಟ್ಟೆ ಅರಳಿಮರ ಸರ್ಕಲ್, ಸಂತೆ ಮೈದಾನ, ಮರೂರು
ಸಾರಿಗೆ ಸೇವೆ ಮತ್ತಷ್ಟು ವಿಸ್ತರಣೆ
ಸಾರಿಗೆ ಸೇವೆಯಿಂದ ವಿದ್ಯಾರ್ಥಿಗಳು, ರೈತರು, ಕಚೇರಿ ಕೆಲಸಗಳಿಗೆ ಓಡಾಡುವವರಿಗೆ ಅನುಕೂಲವಾಗಲಿದೆ. ಜನರ ಅನುಕೂಲಕ್ಕೆ ತಕ್ಕ ಹಾಗೆ ಸಾರಿಗೆ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.
ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್, ಉಪಾಧ್ಯಕ್ಷ ಮಧುರಾಯ್ ಶೇಟ್, ತಹಶೀಲ್ದಾರ್ ಶಿವಾನಂದ ರಾಣೆ, ಮುಖ್ಯಾಧಿಕಾರಿ ಶೆಲ್ಜಾ ನಾಯ್ಕ್, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್, ಸಾಗರ ಘಟಕದ ವ್ಯವಸ್ಥಾಪಕ ಡಿ.ಎಸ್.ರಾಜಪ್ಪ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]