ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 13 SEPTEMBER 2023
SORABA : ಕುಬಟೂರು ಗ್ರಾಮದ ದೊಡ್ಡಕೆರೆಗೆ (Lift irrigation) ಸಚಿವ ಮಧು ಬಂಗಾರಪ್ಪ ಕುಟುಂಬ ಸಮೇತ ಬಾಗೀನ ಅರ್ಪಿಸಿದರು. ಈ ಸಂದರ್ಭ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು, ಬಂಗಾರಪ್ಪ ಅವರ ಬೆಂಬಲಿಗರು ಸೇರಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಇದೆ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಬಂಗಾರಪ್ಪ ಅವರು ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಬವಣೆ ಅರಿತು ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ ಮಾಡಿದ್ದರು. ಇದರಿಂದ ಶೀಘ್ರವಾಗಿ ಯೋಜನೆ ಆರಂಭಿಸಲು ಸಹಕಾರಿಯಾಯಿತು. ನನ್ನ ಹೋರಾಟದಿಂದಾಗಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಯೋಜನೆಗೆ ಮಂಜೂರಾತಿ ನೀಡಿದ್ದರು. ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಯೋಜನೆ ಜಾರಿಎ ಸಹಕಾರ ನೀಡಿದರು. ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಯೋಜನೆ ಪೂರ್ಣಗೊಂಡಿತು. ತಾಲೂಕಿನ ಜನರಿಗೆ ನೀರಾ ವರಿ ಸೌಲಭ್ಯ ಒದಗಿಸಲು ಪಕ್ಷಾತೀತವಾಗಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.
ಸಚಿವ ಮಧು ಬಂಗಾರಪ್ಪ ಪತ್ನಿ ಅನಿತಾ ಮಧು ಬಂಗಾರಪ್ಪ, ಪುತ್ರ ಸೂರ್ಯ ಜೊತೆಯಲ್ಲಿದ್ದರು.
ಇದನ್ನೂ ಓದಿ – ಗಣೇಶ ಹಬ್ಬ, ಈದ್ ಮಿಲಾದ್, ಶಿವಮೊಗ್ಗದಲ್ಲಿ ಮಿನಿಸ್ಟರ್ ನೇತೃತ್ವದಲ್ಲಿ ಮಹತ್ವದ ಮೀಟಿಂಗ್, ಏನೆಲ್ಲ ಚರ್ಚೆಯಾಯ್ತು?
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















