NEWS HIGHLIGHTS
ಆನವಟ್ಟಿ: ಪಟ್ಟಣದ ಸೊರಬ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಖಾಸಗಿ ಕಟ್ಟಡ ಕಾಮಗಾರಿಯ ಪರಿಶೀಲನೆಗಾಗಿ ಭಾನುವಾರ ತೆರಳಿದ್ದ ಮೆಸ್ಕಾಂ ಕಿರಿಯ ಎಂಜಿನಿಯರ್ ಒಬ್ಬರು ಏಣಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಮೆಸ್ಕಾಂ ಜಡೆ ಶಾಖೆಯ ಕಿರಿಯ ಎಂಜಿನಿಯರ್ ಮಹಾನಿಂಗ್ (ರಾಮು) ಅಪರಾಜ್ (46) ಮೃತಪಟ್ಟವರು. ಮೃತರ ಅಂತ್ಯಕ್ರಿಯೆಯು ಸೋಮವಾರ ನೆರವೇರಿತು. ಮೃತರು ಪತ್ನಿಯನ್ನು ಅಗಲಿದ್ದಾರೆ.

ಕಟ್ಟಡದ ಪರಿಶೀಲನೆಗಾಗಿ ಏಣಿ ಹತ್ತಿ ವೀಕ್ಷಿಸುತ್ತಿದ್ದಾಗ ಇವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಬೀಳುವ ರಭಸಕ್ಕೆ ಕಟ್ಟಡದ ಗೋಡೆಗೆ ತಲೆ ಬಡಿದು ಪ್ರಜ್ಞಾಹೀನರಾಗಿದ್ದ ಅವರನ್ನು ತಕ್ಷಣವೇ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಘಟನೆ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.