ಸೊರಬದ ಬಂಗಾರಧಾಮದಲ್ಲಿ ಶಕುಂತಲಾ ಬಂಗಾರಪ್ಪ ಸ್ಮರಣೆ, ಸಮಾಧಿಗೆ ಪೂಜೆ

ಸೊರಬ: ಬಂಗಾರಧಾಮದಲ್ಲಿ ಶಕುಂತಲಾ ಎಸ್.ಬಂಗಾರಪ್ಪ ಅವರ ಪುಣ್ಯಸ್ಮರಣೆ ಅಂಗವಾಗಿ ಸಚಿವ ಮಧು ಬಂಗಾರಪ್ಪ ಅವರು ಕುಟುಂಬ ಹಾಗೂ ಅಭಿಮಾನಿಗಳ ಜತೆಗೂಡಿ ಪೂಜೆ ಸಲ್ಲಿಸಿದರು (tribute).

ಇದನ್ನೂ ಓದಿ : ಮಹಿಳಾ ಮೀಸಲಾತಿ ವಿಧೇಯಕ, ಕೇಂದ್ರ ಸರ್ಕಾರಕ್ಕೆ ಮಾಜಿ ಮಿನಿಸ್ಟರ್‌ ಪ್ರಶ್ನೆ

Minister-Madhu-Bangarappa-offer-prayers-to-Shakuntala-Bangarappa

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ‘ಪ್ರತಿ ವ್ಯಕ್ತಿಯ ಬದುಕಿನಲ್ಲಿಯೂ ತಾಯಿಯ ಪಾತ್ರ ಹಿರಿದಾಗಿರುತ್ತದೆ. ನನ್ನ ಬದುಕಿನಲ್ಲಿ ಸದಾ ಸ್ಮರಣೀಯವಾಗಿರುವ ತಾಯಿಯ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿದ್ದೇವೆʼ ಎಂದರು.

ಮಳೆ ಹಾನಿ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ

ಸೊರಬ ತಾಲೂಕಿನ ಸಾಗದ್ದೆ ಹಾಗೂ ಪುರ ಗ್ರಾಮದಲ್ಲಿ ಭಾರಿ ಮಳೆಗೆ ಮನೆಗಳಿಗೆ ಹಾನಿಯಾಗಿದೆ. ಪ್ರಕೃತಿ ವಿಕೋಪದ ಬಗ್ಗೆ ಅಧಿಕಾರಿಗಳು ಜಾಗ್ರತರಾಗಿರಬೇಕು. ಯಾವುದೇ ಮಳೆ ಹಾನಿಗಳು ಸಂಭವಿಸಿದಲ್ಲಿ ತಕ್ಷಣ ಭೇಟಿ ನೀಡಿ ವರದಿ ಸಿದ್ದ ಮಾಡಿ ಪರಿಹಾರ ನೀಡಲು ಮುಂದಾಗಬೇಕು ಎಂದು ತಹಸೀಲ್ದಾ‌ರ್ ಕೆ.ಪುರಂದರ ಅವರಿಗೆ ಸೂಚಿಸಿದರು.

Minister-Madhu-Bangarappa-offer-prayers-to-Shakuntala-Bangarappa

ಪತ್ರಿಕೋದ್ಯಮಿ ತಿಲಕ್ ಕುಮಾರ್, ಅವರ ಪುತ್ರಿ ಸೌಭಾಗ್ಯ ಲಕ್ಷ್ಮಿ, ಮುಖಂಡರಾದ ತಬಲಿ ಬಂಗಾರಪ್ಪ, ಎಂ.ಡಿ.ಶೇಖರ್, ಸದಾನಂದಗೌಡ, ಡಿ.ಬಿ.ಅಣ್ಣಪ್ಪ ಹಾಲಘಟ್ಟ, ಶಿವಲಿಂಗೇಗೌಡ, ಕೆ.ಪಿ.ರುದ್ರಗೌಡ ಮತ್ತಿತರರು ಹಾಜರಿದ್ದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment