ಆನವಟ್ಟಿ ಪೊಲೀಸರ ಕಾರ್ಯಾಚರಣೆ ಪಿಕಪ್‌ ವಾಹನ ವಶಕ್ಕೆ, ಡ್ರೈವರ್‌ ಅರೆಸ್ಟ್‌, ಕಾರಣವೇನು?

ಸೊರಬ: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಆನವಟ್ಟಿ ಪಟ್ಟಣದಲ್ಲಿ ಪೊಲೀಸರು ಕಾರ್ಯಾಚರಣೆ (Police Raid) ನಡೆಸಿ ವಾಹವನ್ನು ವಶಕ್ಕೆ ಪಡೆದಿದ್ದಾರೆ. (ಈ ಸುದ್ದಿಯನ್ನು ಇನ್ನು 30 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನೂ ಓದಿ » ರಸ್ತೆಯಲ್ಲಿ ದಿಢೀರ್‌ ಎದುರಿಗೆ ಬಂದ ಮುಸುಕುಧಾರಿ, ಖಾರದ ಪುಡಿ ಎರಚಿ, ಗೃಹಿಣಿ ತಲೆಗೆ ರಾಡ್‌ನಿಂದ ಹೊಡೆತ

soraba anavatti graphics

ಮಹೀಂದ್ರಾ ಮ್ಯಾಕ್ಸ್ ಗೂಡ್ಸ್ ವಾಹನದಲ್ಲಿ ಆರು ಹಸುಗಳನ್ನು ಕುತ್ತಿಗೆ ಹಾಗೂ ಕಾಲುಗಳನ್ನು ಕಟ್ಟಿ ತುಂಬಲಾಗಿತ್ತು. ಈ ಸಂಬಂಧ ವಾಹನದ ಚಾಲಕ ಜಟ್ಟೆಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಾನುವಾರುಗಳಿಗೆ ಹಿಂಸೆ ನೀಡಿರುವ ಮತ್ತು ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

HOME-LOAN-PRASHANTH.webp

Leave a Comment