ಶಿವಮೊಗ್ಗ ಲೈವ್.ಕಾಂ | SORABA NEWS | 21 MAY 2021
ಕರೋನ ಸೋಂಕಿತರ ಪ್ರಕರಣ ಹೆಚ್ಚಾದ ಹಿನ್ನೆಲೆ ಸೊರಬ ತಾಲೂಕು ಆನವಟ್ಟಿಯಲ್ಲಿ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಮೇ 24ರವರೆಗೆ ಜನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಆನವಟ್ಟಿ ಪಟ್ಟಣದಲ್ಲಿ 150ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. 18 ಮಂದಿಯನ್ನು ಕರೋನ ಬಲಿ ಪಡೆದಿದೆ. ಇದೆ ಕಾರಣಕ್ಕೆ ಪಟ್ಟಣದಲ್ಲಿ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ.
ಪಟ್ಟಣದಲ್ಲಿ ಏನಿರುತ್ತೆ? ಏನಿರಲ್ಲ?
ಅಧಿಕೃತ ಡೈರಿಗಳಲ್ಲಿ ಸಂಜೆ 6 ಗಂಟೆವರೆಗೆ ಹಾಲು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮೆಡಿಕಲ್ ಶಾಪ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬೆಳಗ್ಗೆ 10 ಗಂಟೆವರೆಗೆ ತರಕಾರಿ ಮಾರಾಟಕ್ಕೆ ಅವಕಾಶವಿದೆ. ತಳ್ಳುಗಾಡಿ ಅಥವಾ ಹೊತ್ತು ಮಾರುವವರು ಪಟ್ಟಣದಲ್ಲಿ ಹೋಗಿ ಮಾರಾಟ ಮಾಡಬೇಕಿದೆ. ಉಳಿದಂತೆ ಇನ್ನಾವುದೆ ಅಂಗಡಿಗಳ ಬಾಗಿಲು ತೆಗೆಯುವಂತಿಲ್ಲ.
ಮೈಕ್ರೋ ಕಂಟೈನ್ಮೆಂಟ್ ಜೋನ್
ಪಟ್ಟಣದ ವಿವಿಧೆಡೆ ಮೈಕ್ರೋ ಕಂಟೈನ್ಮೆಂಟ್ ಜೋನ್‍ಗಳನ್ನು ರಚಿಸಲಾಗಿದೆ. ಒಂದೇ ಬಡಾವಣೆ, ಒಂದೇ ಕುಟುಂಬ ಅಥವಾ ಅಕ್ಕಪಕ್ಕದ ಮನೆಗಳಲ್ಲಿ ಐದಕ್ಕಿಂತಲೂ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ ಈ ರೀತಿ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ. ದೇವಸ್ಥಾನ ಹಕ್ಕಲು, ಸಂತೆ ಮೈದಾನ, ನೆಹರು ನಗರ, ಜೆ.ಸಿ.ಬಡಾವಣೆ, ಬ್ರಾಹ್ಮಣ ಬೀದಿ, ತಿಮ್ಮಾಪುರ ಬಡಾವಣೆಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ.
ಹೆಲ್ಪ್ ಲೈನ್ ನಂಬರ್ ಬಿಡುಗಡೆ
ಕಂಟೈನ್ಮೆಂಟ್ ಪ್ರದೇಶದ ಜನರು ತುರ್ತು ಅಥವಾ ಅಗತ್ಯ ಸೇವೆಗಳಿಗೆ ಅನುಕೂಲವಾಗಲಿ ಎಂದು ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಲಾಗಿದೆ. 08184 267799 ನಂಬರ್‍ಗೆ ಕರೆ ಮಾಡಬಹುದಾಗಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]