ಶಿವಮೊಗ್ಗ ಲೈವ್
ತೀರ್ಥಹಳ್ಳಿ: ಚಲಿಸುತ್ತಿದ್ದ KSRTC ಬಸ್ ಟಯರ್ ಕಳಚಿಬಿದ್ದ ಘಟನೆಯು ಆಗುಂಬೆ ಸಮೀಪ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತ ತಪ್ಪಿದೆ.
ಬಸ್ಸು ಉಡುಪಿಯಿಂದ ಶಿವಮೊಗ್ಗದ ಕಡೆಗೆ ತೆರಳುತಿತ್ತು. ಆಗುಂಬೆ ಬಳಿ ತೆರಳುತ್ತಿದ್ದಾಗ ಬಸ್ಸಿನ ಟೈರ್ ಕಳಚಿಬಿದ್ದಿದೆ. ತಕ್ಷಣ ಎಚ್ಚೆತ್ತ ಚಾಲಕ ಬಸ್ಸನ್ನು ನಿಲ್ಲಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಅಪಘಾತ ತಪ್ಪಿದಂತಾಗಿದೆ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಬಸ್ಸಿನಲ್ಲಿ ಸುಮಾರು 40 ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ.
