ತೀರ್ಥಹಳ್ಳಿಯ ಅನಘಾ ಈಗ ರಾಜ್ಯಕ್ಕೆ ಫಸ್ಟ್‌

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ತೀರ್ಥಹಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Examination) 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದ ಇಲ್ಲಿನ ವಾಗ್ದೇವಿ ಶಿಕ್ಷಣ ಸಂಸ್ಥೆಯ (Vagdevi Educational Institution) ವಿದ್ಯಾರ್ಥಿನಿ ಕೆ.ಎಸ್. ಅನಘಾ ಅವರು ಮರು ಮೌಲ್ಯಮಾಪನದಲ್ಲಿ (Revaluation) 625ಕ್ಕೆ 625 ಅಂಕ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ (State First Rank) ಪಡೆದುಕೊಂಡಿದ್ದಾರೆ.

ಅನಘಾ ಅವರು ಸಮಾಜ ವಿಜ್ಞಾನ ವಿಷಯದಲ್ಲಿ 99 ಅಂಕ ಗಳಿಸಿದ್ದರು. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು (Applied for revaluation). ಈಗ ಪ್ರಕಟವಾಗಿರುವ ಪರಿಷ್ಕೃತ ಫಲಿತಾಂಶದಲ್ಲಿ (Revised results) ಈ ವಿಷಯದಲ್ಲೂ 100ಕ್ಕೆ 100 ಅಂಕಗಳು ಬಂದಿವೆ. ಅನಘಾ, ಮೂಲತಃ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮೇಲಿನ ಕಡಗೋಡು ಗ್ರಾಮದವರು. ಶಿಕ್ಷಕ ದಂಪತಿಯಾದ ಶಿವಕುಮಾರ ಕೆ.ಎಂ. ಮತ್ತು ಮಂಗಳಾ ಬಿ. ಅವರ ಪುತ್ರಿ.

Thirthahalli-Anagha-is-the-district-Topper

ಹೆಚ್ಚಿನ Shimoga News, Shivamogga News ಮತ್ತು THIRTHAHALLI ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಮೇ 17, 2026