ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
THIRTHAHALLI NEWS, 10 NOVEMBER 2024 : ಉದ್ಯೋಗ ಖಾತರಿ ಯೋಜನೆಯಡಿ 2025-26ನೇ ಸಾಲಿಗೆ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ ಕಾಮಗಾರಿಗೆ ಅರ್ಹ ಫಲಾನುಭವಿಗಳಿಂದ ಅಡಿಕೆ ಹಾಗೂ ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಪಡೆಯಲು ಅರ್ಜಿ (Application) ಆಹ್ವಾನಿಸಲಾಗಿದೆ.
ಬೆಳೆಗಳ ವಿಸ್ತರಣೆ ಕೈಗೊಳ್ಳಲು ಕೂಲಿ ಮತ್ತು ಸಾಮಗ್ರಿ ವೆಚ್ಚ ನೀಡಲಾಗುತ್ತಿದ್ದು, ನೀರಾವರಿ ಸೌಲಭ್ಯ, ಜಾಬ್ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಅಡಿಕೆ, ತೆಂಗು, ಗೇರು, ಮಾವು, ಸಪೋಟ, ಚಕ್ಕೆ, ಲವಂಗ, ಸೀತಾಫಲ, ನುಗ್ಗೆ, ಕೋಕೋ, ಹಲಸು, ಡ್ರಾಗನ್ ಫ್ರೂಟ್, ಜಾಯಿಕಾಯಿ ಬೆಳೆಗಳನ್ನು ಬೆಳೆಯಲು ಅವಕಾಶ ಇದೆ. ನ.20ರೊಳಗೆ ಅರ್ಜಿಯನ್ನು ತೀರ್ಥಹಳ್ಳಿ ಹಿರಿಯ ಸಹಾಯಕ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.
ರಿಯಾಯಿತಿ ದರದಲ್ಲಿ ಎಲೆಚುಕ್ಕೆ ನಿಯಂತ್ರಣಕ್ಕೆ ಔಷಧ
ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಕಾರ್ಯಕ್ರಮದಡಿ ಎಲೆಚುಕ್ಕಿ ರೋಗಕ್ಕೆ ಸಿಂಪಡಣೆಗೆ ರಿಯಾಯಿತಿ ದರದಲ್ಲಿ ಔಷಧ ವಿತರಿಸಲಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಶೇ.75, ಎಸ್ಸಿ ಎಸ್ಟಿ ವರ್ಗದ ರೈತರಿಗೆ ಶೇ.90 ರಿಯಾಯಿತಿ ದರದಲ್ಲಿ ಔಷಧ ವಿತರಿಸಲಾಗುತ್ತದೆ. ಆಸಕ್ತರು ನ.16ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಜೇಷ್ಠತೆ, ಲಭ್ಯವಾಗುವ ಔಷಧ ಪ್ರಮಾಣದ ಅನ್ವಯ ಮೀಸಲಾತಿ ಅರ್ಜಿ ಪರಿಗಣಿಸಲಾಗುತ್ತದೆ. ಮಾಹಿತಿಗೆ ತೀರ್ಥಹಳ್ಳಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಸಂಪರ್ಕಿಸಿ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ದಿಢೀರ್ ಕಾರ್ಯಾಚರಣೆ, 20 ಆಟೋಗಳು ಸೀಜ್, 100 ಕೇಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422