ತೀರ್ಥಹಳ್ಳಿಯಲ್ಲಿ ರಾತ್ರೋರಾತ್ರಿ ಗುಂಡಿಗಳು ಮಾಯ, ವರ್ಷಗಟ್ಟಲೆ ಹಾಳಾಗಿದ್ದ ರಸ್ತೆಗೆ ಬಂತು ಡಾಂಬಾರು

ತೀರ್ಥಹಳ್ಳಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ಹಿನ್ನೆಲೆ ತೀರ್ಥಹಳ್ಳಿ ನಳನಳಿಸುತ್ತಿದೆ. ರಾತ್ರೋರಾತ್ರಿ ರಸ್ತೆ ಮೇಲಿನ ಗುಂಡಿಗಳೆಲ್ಲ ಮಾಯವಾಗಿವೆ. ವರ್ಷಗಟ್ಟಲೆ ಹಾಳಾಗಿದ್ದ ರಸ್ತೆ ಡಾಂಬಾರು ಕಂಡಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸೆ.19ರಂದು ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ. ಕಸ್ತೂರಿ ರಂಗನ್‌ ವರದಿ ಕುರಿತು ಸಭೆ ನಡೆಸಲಿದ್ದಾರೆ. ಇನ್ನು, ತೀರ್ಥಹಳ್ಳಿಯಲ್ಲಿ ಸಿಎಂ ಸಂಚರಿಸುವ ಮಾರ್ಗ ಸಂಪೂರ್ಣ ಸ್ವಚ್ಛವಾಗಿದೆ.

Road-Repair-ahead-of-Chief-Minister-DK-Shivakumar-Visit-to-Thirthahalli

ಗುಂಡಿ ಮಾಯ, ಡಾಂಬಾರು ಬಂತು

ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್‌ ನಿಲ್ದಾಣದಿಂದ ಜೆ.ಸಿ.ಆಸ್ಪತ್ರೆವರೆಗಿನ ರಸ್ತೆ ಸಂಪೂರ್ಣ ಸ್ವಚ್ಚಗೊಳಿಸಲಾಗಿದೆ. ರಸ್ತೆಯ ಡಿವೈಡರ್‌ ಮೇಲಿದ್ದ ಮರ, ಗಿಡಗಳ ಕಟ್ಟಿಂಗ್‌ ಮಾಡಲಾಗಿದೆ. ಇನ್ನು, ಜೆ.ಸಿ.ಆಸ್ಪತ್ರೆ ಮುಂಭಾಗದಿಂದ ಸರ್ಕಾರಿ ಕಾಲೇಜು ಮೈದಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿತ್ತು. ಸಿಎಂ ಭೇಟಿ ಹಿನ್ನೆಲೆ ಆ ರಸ್ತೆಯಲ್ಲಿದ್ದ ಗುಂಡಿಗಳೆಲ್ಲವು ಬಂದ್‌ ಆಗಿದ್ದು, ಡಾಂಬಾರ್‌ ಹಾಕಲಾಗಿದೆ.

ಇಷ್ಟು ವರ್ಷ ಯಾಕೆ ಆಗ್ಲಿಲ್ಲ?

ಇನ್ನು, ತೀರ್ಥಹಳ್ಳಿ ರಸ್ತೆಯ ಗುಂಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು ಪ್ರಯೋಜನ ಆಗಿರಲಿಲ್ಲ. ಆದರೆ ಕಳೆದ ಎರಡು ದಿನದಲ್ಲಿ ತೀರ್ಥಹಳ್ಳಿಯ ಚಹರೆ ಬದಲಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಪಕ್ಷದ ಆಡಳಿತವೆ ಇದ್ದರು ಪಟ್ಟಣ ಸ್ವಚ್ಛವಾಗಲು ಮುಖ್ಯಮಂತ್ರಿಯೆ ಆಗಮಿಸಬೇಕಾಯಿತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ತೀರ್ಥಹಳ್ಳಿಯ ಈ ಬದಲಾವಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲು ವೈರಲ್‌ ಆಗಿದೆ.