ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 19 DECEMBER 2020
ಚುನಾವಣೆ ಅಂದರೆ ಹಣ, ಹೆಂಡ, ಗಿಫ್ಟುಗಳನ್ನು ಹಂಚುವ ಉತ್ಸವ ಎಂದು ಹಲವರು ಭಾವಿಸಿದ್ದಾರೆ. ಇವುಗಳನ್ನು ವಿತರಿಸಿ ಗೆಲುವು ಸಾಧಿಸಬಹುದು ಎಂಬ ನಂಬಿಕೆಯು ಹಲವರಲ್ಲಿದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಹಣ, ಹೆಂಡ, ಉಡುಗೊರೆ ಕೊಡದೆ ಚುನಾವಣೆ ನಡೆಸಲು ಅಭ್ಯರ್ಥಿಗಳೆಲ್ಲರು ಶಪಥ ಮಾಡಿದ್ದಾರೆ.
ದೇವರು, ಗ್ರಾಮಸ್ಥರ ಮುಂದೆ ಪ್ರಮಾಣ
ಗ್ರಾಮ ಪಂಚಾಯಿತಿ ಚುನಾವಣೆಗೆ, ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಗ್ರಾಮದಿಂದ ಆರು ಮಂದಿ ಸ್ಪರ್ಧಿಸಿದ್ದಾರೆ. ಇವರೆಲ್ಲ ಇಲ್ಲಿನ ಶ್ರೀ ಈಶ್ವರ ಮತ್ತು ದುರ್ಗಾಪರಮೇಶ‍್ವರಿ ದೇವಸ್ಥಾನದಲ್ಲಿ, ಗ್ರಾಮಸ್ಥರ ಸಮ್ಮುಖದಲ್ಲಿ ಪ್ರಮಾಣ ಮಾಡಿದ್ದಾರೆ. ಮತದಾರರಿಗೆ ಹಣ, ಹೆಂಡದ ಆಮಿಷ ಒಡ್ಡದೆ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಆಣೆ ಮಾಡಿದ್ದಾರೆ.
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ |
ಮಾದರಿ ಚುನಾವಣೆ ಇದೆ ಮೊದಲಲ್ಲ
ಹೊನ್ನೆತಾಳು ಗ್ರಾಮದಲ್ಲಿ ಈ ರೀತಿಯ ಮಾದರಿ ಚುನಾವಣೆ ನಡೆಯುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಮೂರು ಬಾರಿ, ಇದೆ ರೀತಿ ಹಣ, ಹೆಂಡ ಹಂಚುವುದಿಲ್ಲ ಎಂದು ಪ್ರಮಾಣ ಮಾಡಿ, ಅಭ್ಯರ್ಥಿಗಳು ಪ್ರಚಾರ ನಡೆಸಿದ್ದರು. ಈಗಲೂ ಅದು ಮುಂದುವರೆದಿದೆ.
ಈ ಬಾರಿ ಯಾರೆಲ್ಲ ಸ್ಪರ್ಧಿಸಿದ್ದಾರೆ?
ಹೊನ್ನೆತಾಳು ಗ್ರಾಮದಿಂದ ಮೆದೊಳಿಗೆ ಜಯರಾಮ, ಜಯಶ್ರೀ ನಿತ್ಯಾನಂದ, ಬಿ.ಬಿ.ಮಂಜುನಾಥ, ಕಿರಣ್ ರಾಜ್ ಮುಡುಬಾಗಿಲು, ದಿನೇಶ್ ಪೂಜಾರ್ ಮೆದೊಳಿಗೆ, ಪ್ರಭಾಕರ ಬಿಳಿಗೆರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಪ್ರಮಾಣ ಮಾಡಿದ್ದಾರೆ.
ಪ್ರಮಾಣ ಮಾಡಿದ ವಿಡಿಯೋ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

LATEST NEWS
- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು






