ತೀರ್ಥಹಳ್ಳಿಯಲ್ಲಿ ಆತಂಕ ಮೂಡಿಸಿದ್ದ ಚಿರತೆಯ ಮೃತದೇಹ ಪತ್ತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 APRIL 2023

THIRTHAHALLI : ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದು (Cheetah) ಸಾವನ್ನಪ್ಪಿದೆ. ಗ್ರಾಮದಲ್ಲಿಯೇ ಚಿರತೆಯ ಮೃತದೇಹ ಪತ್ತೆಯಾಗಿದೆ.

Cheetah-Found-dead-at-Thirthahalli

ತೀರ್ಥಹಳ್ಳಿ ತಾಲೂಕು ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಸರ ಗ್ರಾಮದ ಜನವಸತಿ ಪ್ರದೇಶದ ಸಿಂಧೋಡಿ ಕಾಡಂಚಿನಲ್ಲಿ ಚಿರತೆ ಮೃತದೇಹ ಪತ್ತೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು, ವನ್ಯಜೀವಿ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಗೃಹಿಣಿ ಆತ್ಮಹತ್ಯೆ ಕೇಸ್, ಗಂಡ, ಅತ್ತೆ, ನಾದಿನಿಗೆ ಜೈಲು, ದಂಡ, ಕಾರಣವೇನು? ಎಷ್ಟು ವರ್ಷ ಜೈಲು ಶಿಕ್ಷೆ?

ಮಲ್ಲೇಸರ ಗ್ರಾಮದ ಸುತ್ತಮುತ್ತಲು ಕೆಲ ಸಮಯದಿಂದ ಚಿರತೆ (Cheetah) ಓಡಾಡುತ್ತಿತ್ತು. ನಾಯಿಗಳು, ದನಗಳನ್ನು ಹಿಡಿದು ತಿಂದಿತ್ತು ಎಂದು ಆರೋಪಿಸಲಾಗುತ್ತಿದೆ. ಚಿರತೆಯಿಂದ ಗ್ರಾಮದಲ್ಲಿ ಆತಂಕ ಮೂಡಿಸಿತ್ತು. ಗ್ರಾಮಸ್ಥರ ದೂರಿನ ಹಿನ್ನೆಲೆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಇಟ್ಟಿತ್ತು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 9, 2023

Leave a Comment