ಶಿವಮೊಗ್ಗ ಲೈವ್.ಕಾಂ | 25 ಮಾರ್ಚ್ 2019
ಕುಡಿದ ಅಮಲಿನಲ್ಲಿ ನಾಗರ ಹಾವು ಹಿಡಿದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ತೀರ್ಥಹಳ್ಳಿಯ ಬೆಟ್ಟಮಕ್ಕಿ ಬಡಾವಣೆಯಲ್ಲಿ ಘಟನೆ ನಡೆದಿದೆ.
ಕುಮಾರ್ (48) ಮೃತ ದುರ್ದೈವಿ. ಮದ್ಯದ ಅಮಲಿನಲ್ಲಿದ್ದ ಕುಮಾರ್, ಮನೆಗೆ ಬಂದ ನಾಗರ ಹಾವು ಹಿಡಿಯಲು ಮುಂದಾಗಿದ್ದಾರೆ. ಯಾರು ಎಷ್ಟೇ ಬುದ್ದಿ ಮಾತು ಹೇಳಿದರೂ ಕೇಳದೆ, ಕುಮಾರ್ ನಾಗರ ಹಾವನ್ನು ಹಿಡಿದಿದ್ದಾರೆ. ಆದರೆ ಹಾವು ನಾಲ್ಕು ಬಾರಿ ಕಚ್ಚಿದ್ದರಿಂದ, ಕುಮಾರ ಕುಸಿದು ಬಿದ್ದಿದ್ದಾರೆ.
ಕೂಡಲೇ ಕುಮಾರ್ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಿದ್ದರಿಂದ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com

LATEST NEWS
- ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

- ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್, ಆಗಿದ್ದೇನು?

- ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

- ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

- ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್ ಇರಲ್ಲ

About The Editor
ನಿತಿನ್ ಆರ್.ಕೈದೊಟ್ಲು











