NEWS HIGHLIGHTS
ಕೋಣಂದೂರು: ಸಮೀಪದ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರೇಬೈಲಿನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಶಾರ್ಟ್ ಸರ್ಕಿಟ್‌ನಿಂದ ಪದ್ಮಾವತಿ ಎಂಬುವವರ ವಾಸದ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಅಗ್ನಿ ಅವಘಡ ಸಂಭವಿಸಿದ ವೇಳೆ ಪದ್ಮಾವತಿ ಅವರು ಮನೆಯಲ್ಲಿ ಇರದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಏನೇನೆಲ್ಲ ನಷ್ಟವಾಗಿದೆ?
ಮನೆಯಲ್ಲಿದ್ದ ₹15,000 ನಗದು, ಚಿನ್ನದ ಒಡವೆಗಳು, ಬೆಲೆಬಾಳುವ ವಸ್ತುಗಳು ಹಾಗೂ ಪ್ರಮುಖ ದಾಖಲೆ ಪತ್ರಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ. ಅಂದಾಜು 50 ಕೆ.ಜಿ. ತೂಕದ 3 ಚೀಲ ಅಡಿಕೆ ಹಾಗೂ 10 ಕ್ವಿಂಟಲ್ ಭತ್ತ ಸಂಪೂರ್ಣವಾಗಿ ನಾಶವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಬೆಂಕಿ ಆರಿಸಿದರು.
ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಕುರಿತು ಪರಿಶೀಲನೆ ನಡೆಸಿದರು. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು