SHIVAMOGGA LIVE NEWS | 11 JANUARY 2023
ತೀರ್ಥಹಳ್ಳಿ : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಕೆಲವು ನ್ಯೂಸ್ ಚಾನಲ್ ಗಳಲ್ಲಿ (channels) ವರದಿಯಾಗಿತ್ತು. ಈ ಸಂಬಂಧ ಕಿಮ್ಮನೆ ರತ್ನಾಕರ್ ಅವರು ತೀರ್ಥಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಿಮ್ಮನೆ ರತ್ನಾಕರ್ ಅವರು ಹೇಳಿದ್ದೇನು?
ತಮ್ಮನ್ನು ಹುಡುಕಿಕೊಂಡು ಯಾರೊ ಬಂದಿದ್ದಾರೆ ಎಂದು ಪಕ್ಷದ ಕಚೇರಿಯಿಂದ ಕರೆ ಮಾಡಿ ತಿಳಿಸಿದರು. ಪಕ್ಷದ ಕಚೇರಿಗೆ ಹೋದಾಗ ಎನ್ಐಎ ಅಧಿಕಾರಿಗಳಿದ್ದರು. ಕಚೇರಿಯ ಬಾಡಿಗೆ ಪಡೆದಿದ್ದು ಯಾವಾಗ ಎಂದು ಪ್ರಶ್ನಿಸಿದರು. ನಾವು 2015ರಲ್ಲಿ ಖಾಸೀಂ ಎಂಬುವವರಿಗೆ 10 ಲಕ್ಷ ರೂ. ಕೊಟ್ಟು ಕಚೇರಿಗಾಗಿ ಜಾಗ ಬಾಡಿಗೆಗೆ ಪಡೆದಿದ್ದವು.8 ವರ್ಷದ ಅವಧಿಗೆ ಪ್ರತಿ ತಿಂಗಳು 1 ಸಾವಿರ ರೂ. ಬಾಡಿಗೆ ಪಾವತಿ ಮಾಡಬೇಕಿತ್ತು. ಡಿ.31ರವರೆಗೆ ಬಾಡಿಗೆ ಪಾವತಿ ಮಾಡಿದ್ದೇವೆ ಎಂದು ಕಿಮ್ಮನೆ ರತ್ನಾಕರ್ ಅವರು ತಿಳಿಸಿದರು.
ಠೇವಣಿ ಹಣ ಹಿಂತಿರುಗಿಸಿದ ಕೂಡಲೆ ಜಾಗವನ್ನು ಬಿಟ್ಟುಕೊಡುವುದಾಗಿ ಖಾಸೀಂ ಅವರ ಕುಟುಂಬಕ್ಕೆ ತಿಳಿಸಿದ್ದೇವೆ. ಇದರ ಹೊರತು ಖಾಸೀಂ ಅವರ ಕುಟುಂಬಕ್ಕು ಪಕ್ಷಕ್ಕು ಯಾವುದೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ, ಕಿಮ್ಮನೆ ಕಚೇರಿಗೂ ಭೇಟಿ
ಮಾಧ್ಯಮಗಳ ವಿರುದ್ಧ ಗರಂ
ಮಾಧ್ಯಮಗಳಲ್ಲಿ (channels) ನಮ್ಮ ಪಕ್ಷದ ಕಚೇರಿ, ಮನೆ ವಿಚಾರವಾಗಿ ಚರ್ಚೆಗಳಾಗುತ್ತಿವೆ. ಇದೆಲ್ಲ ಬಿಜೆಪಿಯವರ ಕಲ್ಪಿತ ಸಂಗತಿ ಎಂದು ಕಿಡಿಕಾರಿದರು. ಕಿಮ್ಮನೆ ರತ್ನಾಕರ್ ಅವರ ಹೇಳಿಕೆಯ ಸಂಪೂರ್ಣ ವಿಡಿಯೋ ಇಲ್ಲಿದೆ.