ತೀರ್ಥಹಳ್ಳಿಯಲ್ಲಿ ಮನೆಯ ಹಂಚು ತೆಗೆದು ಒಳ ನುಗ್ಗಿ ಕಳ್ಳತನ, ಹೇಗಾಯ್ತು? ಏನೇನೆಲ್ಲ ಕದ್ದಿದ್ದಾರೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ತೀರ್ಥಹಳ್ಳಿ: ತಾಲೂಕಿನ ಕುಳ್ಳುಂಡೆ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಯೊಂದರ ಹಂಚು ತೆಗೆದು ಒಳನುಗ್ಗಿದ ಕಳ್ಳರು, ₹59,000 ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಗ್ರಾಮದ ಬೇಬಿ ಎಂಬುವವರು ಅನಾರೋಗ್ಯದ ಕಾರಣದಿಂದ ಮೇ 27ರಂದು ಸಾಗರದ ಕೊರಲಿಕೊಪ್ಪದಲ್ಲಿರುವ ತಮ್ಮ ಸಂಬಂಧಿಯ ಮನೆಗೆ ವಿಶ್ರಾಂತಿಗಾಗಿ ತೆರಳಿದ್ದರು. ಜೂನ್ 8ರಂದು ರಾತ್ರಿ ಕಳ್ಳತನದ ವಿಷಯ ತಿಳಿದು ಮನೆಗೆ ಬಂದು ನೋಡಿದಾಗ, ಮನೆಯ ಹಿಂಭಾಗದ ಸ್ನಾನದ ಗೃಹದ ಹಂಚುಗಳನ್ನು ತೆಗೆದು ಕಳ್ಳರು ಒಳನುಗ್ಗಿರುವುದು ಬೆಳಕಿಗೆ ಬಂದಿದೆ.

Maluru-Police-Station-in-Thirthahalli-taluk.webp

ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ₹10,000 ನಗದು, 2 ಚಿನ್ನದ ಉಂಗುರಗಳು, ತಲಾ 1 ಗ್ರಾಂ ತೂಕದ ಚಿನ್ನದ ಕಾಯಿನ್, ಪೆಂಡೆಂಟ್, ತಾಳಿ, ಕಿವಿಯೋಲೆ ಹಾಗೂ 10 ಗ್ರಾಂ ತೂಕದ ಬೆಳ್ಳಿಯ ಲಕ್ಷ್ಮಿ ವಿಗ್ರಹವನ್ನು ದೋಚಲಾಗಿದೆ. ಈ ಕುರಿತು ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.