ಶಿವಮೊಗ್ಗ ಲೈವ್
ತೀರ್ಥಹಳ್ಳಿ: ತಾಲ್ಲೂಕಿನ ಮಿಟ್ಲಗೋಡು ಗ್ರಾಮದ ಅರುಣಗಿರಿಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಕಾಣಿಕೆ ಹಣ ಕಳವು ಮಾಡಲಾಗಿದೆ.
ದೇವಸ್ಥಾನದಲ್ಲಿ ಪೂಜೆಗೆ ಬಂದಿದ್ದ ಭಕ್ತರೊಬ್ಬರು ದೇವಸ್ಥಾನದಲ್ಲಿ ಕಳ್ಳತನವಾಗಿರುವುದನ್ನು ಗಮನಿಸಿ ಅರ್ಚಕರಿಗೆ ಮಾಹಿತಿ ನೀಡಿದ್ದರು. ಅರ್ಚಕರು, ಗ್ರಾಮಸ್ಥರು ಪರಿಶೀಲಿಸಿದಾಗ, ದೇವಸ್ಥಾನದ ಬಾಗಿಲನ್ನು ಮೀಟಿ ಒಳಗೆ ಪ್ರವೇಶಿಸಿರುವುದು ಗೊತ್ತಾಗಿದೆ. ಹುಂಡಿಯ ಲಾಕ್ ಮುರಿದು ಅದರಲ್ಲಿದ್ದ ಅಂದಾಜು ₹500 ಚಿಲ್ಲರೆ ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
