ಕಾರ್ಯಕ್ರಮ ಮುಗಿಸಿ ಕುಟುಂಬದವರು ಮನೆಗೆ ಬಂದಾಗ ಬಾಗಿಲು ತೆರೆದಿತ್ತು, ತೀರ್ಥಹಳ್ಳಿಯಲ್ಲಿ ಕೇಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ತೀರ್ಥಹಳ್ಳಿ: ಮನೆಯವರು ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ಹೋದ ಸಂದರ್ಭ ಮನೆಯ ಬಾಗಿಲಿನ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ (gold) ದೋಚಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ತೆಂಗಿನಕೊಪ್ಪ ಗ್ರಾಮದ ಸಂಪಿಗೆಸರದಲ್ಲಿ ನಡೆದಿದೆ.

ಪಾಂಡೇಶ್ ಅವರು ಗುರುವಾರ ಮಧ್ಯಾಹ್ನ 12.30ಕ್ಕೆ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಕುಟುಂಬ ಸಹಿತ ಸಂಪಿಗೆಸರದಲ್ಲಿರುವ ಸಂಬಂಧಿಯೊಬ್ಬರ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 3.30ಕ್ಕೆ ಮನೆಗೆ ಹಿಂತಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

Thirthahalli Police Station

ಬಾಗಿಲಿಗೆ ಹಾಕಿದ್ದ ಬೀಗವನ್ನು ಕಳ್ಳರು ಮುರಿದು. ಬೆಡ್ ರೂಮಿನಲ್ಲಿದ್ದ ಬೀರುವನ್ನು ತೆರೆದು ಲಾಕರ್‌ನಲ್ಲಿದ್ದ ಆಭರಣ ಕಳವು ಮಾಡಲಾಗಿದೆ. ₹1.35 ಲಕ್ಷ ಮೌಲ್ಯದ 10 ಗ್ರಾಂ ಚಿನ್ನದ ಕರಿಮಣಿ ಸರ, ₹1.08 ಲಕ್ಷ ಮೌಲ್ಯದ 8 ಗ್ರಾಂ ಚಿನ್ನದ ಸರ, ₹2.16 ಲಕ್ಷ ಮೌಲ್ಯದ 16 ಗ್ರಾಂ ತೂಕದ ಮತ್ತೊಂದು ಚಿನ್ನದ ಸರ, ತಲಾ 10 ಗ್ರಾಂ ತೂಕದ ಎರಡು ಜೋಡಿ ಕಿವಿ ಓಲೆಗಳು ಹಾಗೂ ₹54,000 ಮೌಲ್ಯದ ಒಂದು ಮುತ್ತಿನ ಸರ ಸೇರಿವೆ. ಒಟ್ಟು 58 ಗ್ರಾಂ ತೂಕದ ಸುಮಾರು ₹7,83,000 ಮೌಲ್ಯದ ಆಭರಣಗಳನ್ನು ಕಳ್ಳರು ದೋಚಿದ್ದಾರೆ ಎಂದು ಅಂದಾಜಿಸಲಾಗಿದೆ.

ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೆ ಪತ್ನಿಯೂ ನೇಣಿಗೆ ಶರಣು, ಘಟನೆಗೆ ಪೊಲೀಸ್‌ ಸಿಬ್ಬಂದಿ ಕಾರಣವಾ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment