ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021
ಕರೋನ ಈಗ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಸಾವು, ನೋವು ಉಂಟು ಮಾಡುತ್ತಿದೆ. ಇದು ಜನರಲ್ಲಿ ಭೀತಿ ಹೆಚ್ಚಿಸಿದೆ. ಈ ನಡುವೆ ಕರೋನ ತಡೆಗೆ ಹಲವು ಕಡೆ ಸೀಲ್ ಡೌನ್ ಮಾಡಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ 500ಕ್ಕೂ ಹೆಚ್ಚು ಸಕ್ರಿಯ ಕರೋನ ಪ್ರಕರಣಗಳಿವೆ. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಇನ್ನಿಲ್ಲದ ಕ್ರಮ ಕೈಗೊಳ್ಳಲಾಗುತ್ತಿದೆ.
ಯಾವ್ಯಾವ ಹಳ್ಳಿಯಲ್ಲಿ ಎಷ್ಟಿದೆ ಕೇಸ್?
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇದೆ ಕಾರಣಕ್ಕೆ ಕೋಣಂದೂರನ್ನು ಲಾಕ್ ಡೌನ್ ಮಾಡಲಾಗಿದೆ.
ಇನ್ನು, ಮುಳುಬಾಗಿಲು ವ್ಯಾಪ್ತಿಯಲ್ಲಿ ಸುಮಾರು 30 ಪ್ರಕರಣಗಳಿವೆ. ಅರೇಹಳ್ಳಿ, ಗುಡ್ಡೇಕೊಪ್ಪ, ಹಾದಿಗಲ್ಲು, ಅರಳಾಪುರ, ಕನ್ನಂಗಿ, ಮೇಲಿನ ಕುರುವಳ್ಳಿ, ಸಾಲ್ಗುಡಿ ವ್ಯಾಪ್ತಿಯಲ್ಲಿ 20ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
ಆರಗ, ಅರಳಸುರಳಿ, ಬಸವಾನಿ, ಬೆಜ್ಜವಳ್ಳಿ, ದೇಮ್ಲಾಪುರ, ಹೆದ್ದೂರು, ಹೆಗ್ಗೋಡು, ಹೊಸಹಳ್ಳಿ, ಹುಂಚದಕಟ್ಟೆ, ಮಂಡಗದ್ದೆ, ಮೇಗರವಳ್ಳಿ, ನೆರಟೂರು, ನೊಣಬೂರು, ಸಿಂಗನಬಿದರೆ, ತೀರ್ಥಮತ್ತೂರು, ತ್ರಯಾಂಬಕಪುರ, ತೂದುರು ವ್ಯಾಪ್ತಿಯಲ್ಲಿ 10ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
ಆಗುಂಬೆ, ಬಾಂಡ್ಯಾ, ದೇವಂಗಿ, ಹಣಗೆರೆ, ಹಾರೊಗುಳಿಗೆ, ಹೊನ್ನೆತಾಳು, ಕುಡುಮಲ್ಲಿಗೆ, ಮೇಳಿಗೆ, ನಾಲೂರು, ಸಾಲೂರು, ಶೇಡ್ಗಾರು, ಬಿದರಗೋಡು ವ್ಯಾಪ್ತಿಯಲ್ಲಿ 10ಕ್ಕಿಂತಲೂ ಕಡಿಮೆ ಸಕ್ರಿಯ ಪ್ರಕರಣಗಳಿವೆ.
ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422