ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯ ದಿನಾಂಕ ಪ್ರಕಟ, ಯಾವ್ಯಾವ ದಿನ ಏನೇನು ನಡೆಯಲಿದೆ?

 ಶಿವಮೊಗ್ಗ  LIVE 

ತೀರ್ಥಹಳ್ಳಿ: ಪುರಾಣ ಪ್ರಸಿದ್ದ ಎಳ್ಳಮಾವಾಸ್ಯೆ ಜಾತ್ರೆಗೆ (Ellemavasya Jatre) ಎಲ್ಲ ಸಿದ್ಧತೆ ಮಾಡಲಾಗುತ್ತಿದೆ. ಡಿ.19ರಿಂದ ಮೂರು ದಿನ ಜಾತ್ರೆ ನಡೆಯಲಿದೆ ಎಂದು ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಹಾಲಿಗೆ ನಾಗರಾಜ್ ಹೇಳಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲಿಗೆ ನಾಗರಾಜ್‌, ಡಿ.19ರಂದು ತುಂಗಾನದಿಯಲ್ಲಿ ತೀರ್ಥಸ್ನಾನ, ಡಿ.20ರಂದು ರಾಮೇಶ್ವರ ದೇವರ ರಥೋತ್ಸವ ಹಾಗೂ ಡಿ.21ರಂದು ಸಂಜೆ ತುಂಗಾನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ತಿಳಿಸಿದರು.

Thirthahalli ellamavasye Teppotsava
2024ರ ತೆಪ್ಪೋತ್ಸವ

ಸುಮಾರು ನೂರು ವರ್ಷದ ಹಿಂದೆ ನಿರ್ಮಿಸಲಾಗಿರುವ ದೇವರ ರಥದ ಒಂದು ಚಕ್ರ ಪೂರ್ಣವಾಗಿ ಶಿಥಿಲಗೊಂಡಿದೆ. ರಥದ ಚಕ್ರವನ್ನು ಹೊಸದಾಗಿ ನಿರ್ಮಿಸಲಾಗಿದೆ. ಚಕ್ರ ನಿರ್ಮಾಣಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರ್ಥಿಕ ಸಹಕಾರ ನೀಡಿದ್ದಾರೆ ಎಂದರು.  

ಸಮಿತಿ ಅಧ್ಯಕ್ಷರಾಗಿ ಹಾಲಿಗೆ ನಾಗರಾಜ್

ಶ್ರೀರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹಾಲಿಗೆ ನಾಗರಾಜ್‌ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸೋಮವಾರ ದೇವಸ್ಥಾನದ ಸಭಾಂಗಣದಲ್ಲಿ ಸಮಿತಿ ಸದಸ್ಯರ ಸಭೆಯಲ್ಲಿ ನಾಗರಾಜ್‌ ಆಯ್ಕೆಗೊಂಡರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಡಿ.28ರಿಂದ ಸರಳ ತಂತ್ರಗಳು, ಕ್ರಿಯಾಯೋಗ ಶಿಬಿರ, ನೋಂದಣಿ ಅರಂಭ

ಸಮಿತಿ ಸದಸ್ಯರಾದ ಎಚ್.ಆರ್. ಮಹಾಬಲ, ಪ್ರದೀಪ್, ಪೂರ್ಣೇಶ್, ತ್ರಿವೇಣಿ, ಜ್ಯೋತಿ, ಅರ್ಚಕ ರಾಕೇಶ್‌ ಭಟ್ ಇದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment