ತೀರ್ಥಹಳ್ಳಿಯ ಕುರುವಳ್ಳಿ – ಬಾಳೆಬೈಲು ಹೆದ್ದಾರಿಯಲ್ಲಿ ತಡೆಗೋಡೆ ಸಂಪೂರ್ಣ ಕುಸಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 JULY 2024

THIRTHAHALLI : ಕುರುವಳ್ಳಿ – ಬಾಳೆಬೈಲು ನಡುವಿನ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ (Bypass) ರಸ್ತೆಯಲ್ಲಿ ತಡೆಗೋಡೆ ಮುರಿದು ಬಿದ್ದಿವೆ. ಇದರಿಂದ ಮತ್ತಷ್ಟು ಮಣ್ಣು ರಸ್ತೆ ಮೇಲೆ ಬಿದ್ದಿದೆ. ಸಂಜೆ ವೇಳೆಗೆ ಸುರಿದ ಗಾಳಿ, ಮಳೆಗೆ ತಡೆಗೋಡೆ ಕುಸಿದು ಬಿದ್ದಿವೆ.

ಸೋಮವಾರ ಧರೆ ಕುಸಿತದಿಂದ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ತೀರ್ಥಹಳ್ಳಿ ಬೈಪಾಸ್‌ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿತ್ತು. ತೀರ್ಥಹಳ್ಳಿಯಲ್ಲಿ ಇವತ್ತು ಕೂಡ ಮಳೆ ಮುಂದುವರೆದಿದ್ದು, ತಡೆಗೋಡೆ ಪೂರ್ತಿ ಕುಸಿದಿದೆ. ಹಾಗಾಗಿ ಎತ್ತರದ ಪ್ರದೇಶದಿಂದ ಮಣ್ಣು ಸಂಪೂರ್ಣವಾಗಿ ಬೈಪಾಸ್‌ ರಸ್ತೆಗೆ ಬಂದು ಬಿದ್ದಿದೆ.

revetment-wall-collapse-in-thirthahalli-bypass-road.

ಧರೆ ಕುಸಿತದ ಹಿನ್ನೆಲೆ ಬೈಪಾಸ್‌ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರಸ್ತೆಗೆ ಉರುಳುವ ಸ್ಥಿತಿಯಲ್ಲಿದ್ದ ಮರವೊಂದನ್ನು ಕಡಿದು ಬಳಿಕ ಇವತ್ತು ಮಧ್ಯಾಹ್ನ ರಸ್ತೆಯ ಒಂದು ಬದಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತಡೆಗೋಡೆ ಕುಸಿದಿದ್ದರಿಂದ ವಾಹನ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ.

revetment%20wall

ಇದನ್ನೂ ಓದಿ ⇓

ಅಂಜನಾಪುರ ಜಲಾಶಯ ಭರ್ತಿ, ಕೋಡಿ ಬಿದ್ದ ವಿಷಯ ತಿಳಿದು ರೈತರು ಹರ್ಷ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment