ವಾಕಿಂಗ್‌ ತೆರಳುವವರೆ ಹುಷಾರ್‌, ಶಿವಮೊಗ್ಗದ ಮೂರು ಕಡೆ ಮಹಿಳೆಯರ ಕೊರಳಿಗೆ ಕೈ ಹಾಕಿದ ಖದೀಮರು

ಶಿವಮೊಗ್ಗ
LIVE

SHIVAMOGGA LIVE NEWS | 6 APRIL 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಮಲ್ಲೇಶ್ವರದ ನಗರದಲ್ಲಿ ವಾಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ ಕಳವು ಪ್ರಕರಣ ಸಿಸಿಟಿವಿ ದೃಶ್ಯ ವೈರಲ್‌ ಆಗಿತ್ತು. ಅದೇ ದಿನ ಖದೀಮರು ನಗರದ ವಿವಿಧೆಡೆ ಮಹಿಳೆಯರ ಚಿನ್ನದ ಸರ ಕಳವು ಮಾಡಿದ್ದಾರೆ. ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಕೇಸ್‌ 1 : ಮಲ್ಲೇಶ್ವರ ನಗರ

ಸಮಯ : ಬೆಳಗ್ಗೆ 5.15

point-1ಮಲ್ಲೇಶ್ವರ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮನೆ ಎದುರು ವಾಕಿಂಗ್‌ ಮಾಡುತ್ತಿದ್ದ ನಾಗರತ್ನಮ್ಮ ಎಂಬುವವರ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರು ಮಹಿಳೆ ಬಳಿ ಹಿಂದಿ ಭಾಷೆಯಲ್ಲಿ ಗೋಪಾಲ್‌ ಅವರ ಮನೆ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಬಳಿಕ ಹಿಂಬದಿ ಸವಾರ ಕೆಳಗಿಳಿದು ಬಂದು ಮಹಿಳೆ ಕೊರಳಲ್ಲಿದ್ದ 1.80 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಕಸಿದುಕೊಂಡು ಪರಾರಿಯಾಗಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಸ್‌ 2 : ಗುಂಡಪ್ಪಶೆಡ್‌

ಸಮಯ : ಬೆಳಗ್ಗೆ 5.20

point-2‘ಮನೆ ಮುಂದೆ ಗಿಡದಿಂದ ಹೂವು ಕೊಯ್ಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಪ್ರಿಂಟಿಂಗ್‌ ಪ್ರೆಸ್‌ ಎಲ್ಲಿ ಎಂದು ಕನ್ನಡ ಮತ್ತು ಹಿಂದಿ ಮಿಶ್ರಿತ ಭಾಷೆಯಲ್ಲಿ ಕೇಳಿದರು. ಇದೇ ವೇಳೆ ಹಿಂಬದಿ ಸವಾರ ಕೆಳಗಿಳಿದು ತಮ್ಮ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆʼ ಎಂದು ಆರೋಪಿಸಿ ಸುಶೀಲಮ್ಮ ಎಂಬುವವರು ಆರೋಪಿಸಿದ್ದಾರೆ. 2.10 ಲಕ್ಷ ರೂ. ಮೌಲ್ಯದ 35 ಗ್ರಾಂ ತೂಕದ ಮಾಂಗಲ್ಯ ಸರ ಕಳುವಾಗಿದೆ ಎಂದು ದೂರಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

HOME-LOAN-PRASHANTH.webp

ಕೇಸ್‌ 3 : ಶರಾವತಿ ನಗರ

ಸಮಯ : ಬೆಳಗ್ಗೆ 6 ಗಂಟೆ

point-3ಶಾರದಾ ನಗರ ನಿವಾಸಿ ಲೋಕಮಾತೆ ಅವರು ಸರ್ಕ್ಯೂಟ್‌ ಹೌಸ್‌ನಲ್ಲಿ ವಾಕಿಂಗ್‌ಗೆ ತೆರಳುತ್ತಿದ್ದರು. ಶರಾವತಿ ನಗರದಲ್ಲಿ ನಡೆದು ಹೋಗುತ್ತಿದ್ದಾಗ ಪಲ್ಸರ್‌ ಬೈಕ್‌ನಲ್ಲಿ ಬಂದ ಇಬ್ಬರು ಸರಗಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರ ಪೈಕಿ ಹಿಂಬದಿ ಕುಳಿತಿದ್ದನು ಇಳಿದು ಬಂದು ಲೋಕಮಾತೆ ಅವರ ಕೊರಳಲ್ಲಿ ಇದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಅರ್ಧ ಚಿನ್ನದ ಸರ ಮತ್ತು ಪೆಂಡೆಂಟ್‌ ಕಿತ್ತುಕೊಂಡು ಹೋಗಿದ್ದಾನೆ. ಸುಮಾರು 8 ಗ್ರಾಂ ಚಿನ್ನ ಕಳುವಾಗಿದೆ. ಇದರ ಮೌಲ್ಯ 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದು ಲಕ್ಷದ ರೂ. ಲಂಚದ ಹಣದೊಂದಿಗೆ ಪೊಲೀಸ್‌ ಎಎಸ್‌ಐ ಲೋಕಾಯುಕ್ತ ಬಲೆಗೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment