ಉಂಬ್ಳೆಬೈಲು ಬಳಿ ಚಿರತೆ ದಾಳಿ, ಶೆಟ್ಟಿಹಳ್ಳಿ ಅರಣ್ಯದಲ್ಲಿ ಚಿರತೆಗಳ ಕಾಳಗ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2021

ಶಿವಮೊಗದ ತಾಲೂಕಿನ ಎರಡು ಕಡೆ ಚಿರತೆಗಳ ದಾಳಿಯಾಗಿದೆ. ಒಂದು ಕಡೆ ಚಿರತೆ ದಾಳಿಗೆ ದನ ಮತ್ತು ಕರು ಮೃತಪಟ್ಟಿವೆ. ಇನ್ನೊಂದು ಪ್ರಕರಣದಲ್ಲಿ ಚಿರತೆಗಳ ಮಧ್ಯೆ ಕಾದಾಟ ನಡೆದು ಒಂದು ಚಿರತೆ ಸಾವನ್ನಪ್ಪಿದೆ. ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ದನ, ಕರು ಸಾವು

ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಿಗೆರೆ ಗ್ರಾಮದಲ್ಲಿ ರಾತ್ರಿ ಚಿರತೆ ದಾಳಿ ಮಾಡಿದೆ. ಕೃಷ್ಣಮೂರ್ತಿ ಅವರಿಗೆ ಸೇರಿದ್ದ ದನ ಮತ್ತು ಕರುವಿನ ಮೇಲೆ ಕೊಟ್ಟಿಗೆಯಲ್ಲಿ ದಾಳಿಯಾಗಿದೆ.

1632381453891714 0

ಘಟನೆಯಲ್ಲಿ ದನ ಮತ್ತು ಕರು ಮೃತಪಟ್ಟಿವೆ. ಕೆಲವು ತಿಂಗಳ ಹಿಂದೆ ಸಾಲಿಗೆರೆ ಗ್ರಾಮದಲ್ಲಿ ಕಾಡಾನೆಗಳು ದಾಳಿ ಮಾಡಿ ಬೆಳೆ ಹಾನಿ ಉಂಟು ಮಾಡಿದ್ದವು. ಇದರಿಂದ ಜನರು ಸಂಕಷ್ಟಕ್ಕೀಡಾಗಿದ್ದರು.

ಚಿರತೆಗಳ ನಡುವೆ ಕಾಳಗ

ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಬ್ಬಂದಿ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದಾಗ ಚಿರತೆ ಮೃತದೇಹ ಕಾಣಿಸಿದೆ.

LifeSpring%2BKan%2B02

ಪರಿಶೀಲನೆ ನಡೆಸಿದಾಗ ಕಾದಾಟದಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ವನ್ಯಜೀವಿ ವಿಭಾಗದ ವೈದ್ಯ ಡಾ.ವಿನಯ್ ಮತ್ತು ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿದರು. ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಚಿರತೆಗಳ ನಡುವೆ ಕಾದಾಟ ನಡೆದಿರುವುದು ಇದೆ ಮೊದಲು ಎಂದು ಹೇಳಲಾಗುತ್ತಿದೆ.

AVvXsEi8Ac5ZsMIgS4Jz30esQXnANsyqm9IIwg nufI lektr jUlKUuz2As55HIMKzaVCSA mvi3ziJYrT6bh95Gghl41xeUHT4DKu4p30aRUJoWqJ283zKAkt4M4 uZKs5Mhybj YH8TOh0wmuu1WMMkIOKf4JU7gM IC2 ZFBa4 KlGL6c0GU9JI9z46Bw=s1466

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

Leave a Comment