ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS |10 JANUARY 2023
ಶಿವಮೊಗ್ಗ : ನಕಲಿ ದಾಖಲೆ ಒದಗಿಸಿ ಬ್ಯಾಂಕ್ ಒಂದರಿಂದ ಗೃಹ ಸಾಲ ಪಡೆದು ವಂಚಿಸಲಾಗಿದೆ (fraud). ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

37 ಲಕ್ಷ ರೂ. ವಂಚನೆ
ಪ್ರೇಮ್ ಎಂಬಾತ ನಕಲಿ ದಾಖಲೆಗಳನ್ನು ಒದಗಿಸಿ ಪಿ.ಎನ್.ಬಿ ಬ್ಯಾಂಕಿನಿಂದ 37 ಲಕ್ಷ ರೂ. ಸಾಲ ಪಡೆದಿದ್ದಾನೆ. ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಈತ ನಕಲಿ (fraud) ದಾಖಲೆಗಳನ್ನು ಒದಗಿಸಿದ್ದ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ಗೃಹ ಸಾಲಕ್ಕಾಗಿ ಸೇಲ್ ಡೀಡ್ ಅನ್ನು ಬ್ಯಾಂಕಿಗೆ ಒದಗಿಸಿದ್ದ. ಇವುಗಳ ಪರಿಶೀಲನೆ ಬಳಿಕ ಬ್ಯಾಂಕ್ ಸಾಲ ಮಂಜೂರು ಮಾಡಿತ್ತು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೇಲ್ ಡೀಡ್ ಪರಿಶೀಲನೆಗೆ ಒಳಪಡಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಪ್ರೇಮ್ ಎಂಬಾತನ ವಿರುದ್ಧ ಬ್ಯಾಂಕ್ ವತಿಯಿಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬ್ಯಾಂಕಿಗೆ ಲಕ್ಷ ಲಕ್ಷ ರೂ. ವಂಚನೆ
ದೊಡ್ಡಪೇಟೆ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ತನಿಕೆ ನಡೆಯುತ್ತಿದೆ.

CLICK HERE TO JOIN SHIVAMOGGA LIVE WHATSAPP GROUP



