ಜೈಲ್‌ ಸರ್ಕಲ್‌ನಲ್ಲಿ ದಿಢೀರ್‌ ಪ್ರತಿಭಟನೆ, ಟೈರ್‌ಗೆ ಬೆಂಕಿ ಹಚ್ಚಿ ಸ್ಮಾರ್ಟ್‌ ಸಿಟಿ ಅಧಿಕಾರಿಗಳ ವಿರುದ್ಧ ಘೋಷಣೆ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 22 MAY 2023

SHIMOGA : ಏಕಾಏಕಿ ಧ್ವಜ ಸ್ತಂಭ (Flag Pole) ತೆರವು ಮಾಡಲು ಮುಂದಾದ ಸ್ಮಾರ್ಟ್‌ ಸಿಟಿ ಅಧಿಕಾರಿಗಳ ವಿರುದ್ಧ ಸ್ಥಳೀಯ ಕಾರ್ಪೊರೇಟರ್‌ ಮತ್ತು ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

Protest-in-Jail-Circle-Against-Smart-city-officers

ಜೈಲ್‌ ಸರ್ಕಲ್‌ನಲ್ಲಿ ಕರ್ನಾಟಕದ ಧ್ವಜದ ಸ್ತಂಭವನ್ನು (Flag Pole) ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಇವತ್ತು ತೆರವು ಮಾಡಲು ಮುಂದಾಗಿದ್ದರು. ಜೆಸಿಬಿ ಬಳಸಿ ಧ್ವಜ ಸ್ತಂಭದ ಕಟ್ಟೆಯನ್ನು ಒಡೆದಿದ್ದರು. ವಿಚಾರ ತಿಳಿಯುತ್ತಿದ್ದಂತೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಹೊಸಮನೆ ಬಡಾವಣೆ ಕಾರ್ಪೊರೇಟರ್‌ ರೇಖಾ ರಂಗನಾಥ್‌ ಅವರು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಿಲ್ಲಿಸಿದರು.

ಇದನ್ನೂ ಓದಿ – ಜೈಲ್‌ ಸರ್ಕಲ್‌ನಲ್ಲಿ ಸ್ವಲ್ಪ ಯಾಮಾರಿದ್ರು ಬೈಕ್‌ ಸವಾರರಿಗೆ ಅಪಾಯ ಫಿಕ್ಸ್‌

ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಸ್ಥಳೀಯರ ಅಭಿಪ್ರಾಯ ಕೇಳದೆ ಏಕಾಏಕಿ ಧ್ವಜ ಸ್ತಂಭ ತೆರವು ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಕೆಲಸಕ್ಕೆ ಕೈ ಹಾಕಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದೆ ವೇಳೆ ಜೈಲ್‌ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್‌ ಸಿಟಿ ಅಧಿಕಾರಿಗಳ ವಿರುದ್ಧ ದೂರು

REKHA%20RANGANATHAಪಾಲಿಕೆ ಸದಸ್ಯೆ ರೇಖಾ ರಂಗನಾಥ್‌ ಮಾತನಾಡಿ, 1988ರಲ್ಲಿ ಜ್ವಾಲಾಮುಖಿ ಕನ್ನಡ ಸಂಘದವರು ಧ್ವಜ ಸ್ತಂಭ ಸ್ಥಾಪನೆ ಮಾಡಿದ್ದರು. ಪ್ರತಿ ವರ್ಷ ಇಲ್ಲಿ ಅದ್ಧೂರಿಯಾಗಿ ರಾಜ್ಯೋತ್ಸವ ನಡೆಯುತ್ತಿದೆ. ಇದರಿಂದ ಯಾರಿಗೂ ತೊಂದರೆ ಆಗಿರಲಿಲ್ಲ. ಆದರೆ ಸ್ಥಳೀಯರ ಅಭಿಪ್ರಾಯ ಕೇಳದೆ, ಪಾಲಿಕೆ ಸದಸ್ಯೆಯಾದ ತಮಗೂ ಮಾಹಿತಿ ನೀಡದೆ ಏಕಾಏಕಿ ತೆರವು ಮಾಡಲಾಗುತ್ತಿದೆ. ಇದು ಅಕ್ಷಮ್ಯ. ಆದ್ದರಿಂದ ಸ್ಮಾರ್ಟ್‌ ಸಿಟಿ ಅಧಿಕಾರಿಗಳ ವಿರುದ್ಧ ದೂರು ನೀಡಲಿದ್ದೇವೆ ಎಂದರು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ

KIRAN%20KUMARಕರ್ನಾಟಕ ರಕ್ಷಣಾ ವೇದಿಕೆ ಯುವ ಸಂಘದ ಜಿಲ್ಲಾಧ್ಯಕ್ಷ ಕಿರಣ್‌ ಕುಮಾರ್‌ ಮಾತನಾಡಿ, ಸಾ.ರಾ.ಗೋವಿಂದು ಅವರು ಧ್ವಜ ಸ್ತಂಭವ ಉದ್ಘಾಟಿಸಿದ್ದರು. ರಾಜ್ಯದ ಬಾವುಟ ಹಾರಡುತ್ತಿದ್ದ ಸ್ತಂಭವನ್ನು ತೆರವು ಮಾಡಿದ್ದು ಕನ್ನಡಿಗರಿಗೆ ಅವಮಾನ ಮಾಡಿದಂತೆ. ಈ ಧ್ವಜ ಸ್ತಂಭ ತೆರವು ಮಾಡದೆ, ಇಲ್ಲಿಯೇ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ – ಶಿವಮೊಗ್ಗ ಲೈವ್‌ ವರದಿ ಇಂಪ್ಯಾಕ್ಟ್‌, ಜೈಲ್‌ ಸರ್ಕಲ್‌ನಲ್ಲಿ ಕಾಮಗಾರಿ ಶುರು, ಡಾ.ಅಂಬೇಡ್ಕರ್‌ ನಾಮಫಲಕ ಪುನರ್‌ ಸ್ಥಾಪನೆ

ದಿಢೀರ್‌ ಪ್ರತಿಭಟನೆಯಿಂದಾಗಿ ಜೈಲ್‌ ವೃತ್ತದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

SHIVAMOGGA LIVE NITIN KAIDOTLU QUOTE jpg

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment