ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 4 FEBRUARY 2023
SHIMOGA | ಪ್ರಸಕ್ತ ಕೇಂದ್ರ ಬಜೆಟ್ ನಲ್ಲಿ ಶಿವಮೊಗ್ಗ – ಶಿಕಾರಿಪುರ – ರಾಣೇಬೆನ್ನೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಮೂರು ರೈಲು ನಿಲ್ದಾಣಗಳನ್ನು (Railway Station) ಅಮೃತ್ ಭಾರತ್ ಸ್ಕೀಂ ಅಡಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ.
ಬಜೆಟ್ ನಲ್ಲಿ ನೈಋತ್ಯ ರೈಲ್ವೆಯ ಹತ್ತು ಹೊಸ ರೈಲ್ವೆ ಮಾರ್ಗಗಳಿಗೆ ಅನುದಾನ ಬಿಡೆಯಾಗಿದೆ. ಈ ಪೈಕಿ ಶಿವಮೊಗ್ಗ – ಶಿಕಾರಿಪುರ – ರಾಣೇಬೆನ್ನೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಮೂರು ನಿಲ್ದಾಣಗಳು ಮೇಲ್ದರ್ಜೆಗೆ
ದೇಶಾದ್ಯಂತ ಅಮೃತ್ ಭಾರತ್ ಸ್ಕೀಂ ಅಡಿ 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ಈ ಸ್ಕೀಂಗೆ ಜಿಲ್ಲೆಯ 3 ನಿಲ್ದಾಣಗಳು ಆಯ್ಕೆಯಾಗಿವೆ. ಶಿವಮೊಗ್ಗ, ಸಾಗರ ಜಂಬಗಾರು ಮತ್ತು ತಾಳಗುಪ್ಪ ನಿಲ್ದಾಣಗಳ ಅಭಿವೃದ್ಧಿಗೆ ಯೋಜಿಸಲಾಗಿದೆ.
ಸಿಟಿ ಸೆಂಟರ್ ಮಾದರಿ ಅಭಿವೃದ್ಧಿ
ಅಮೃತ್ ಭಾರತ್ ಯೋಜನೆ ಅಡಿ ರೈಲ್ವೆ ನಿಲ್ದಾಣ (Railway Station) ಮೇಲ್ದರ್ಜೆಗೇರಿಸಲಾಗುತ್ತಿದೆ. ನೈಋತ್ಯ ರೈಲ್ವೆಯ 52 ರೈಲು ನಿಲ್ದಾಣಗಳನ್ನು ಸಿಟಿ ಸೆಂಟರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯ ಮೂರು ನಿಲ್ದಾಣಗಳು ಇದಕ್ಕೆ ಆಯ್ಕೆಯಾಗಿದೆ. ಈ ಸ್ಕೀಂ ಅಡಿ ರೈಲ್ವೆ ನಿಲ್ದಾಣದ ಕಟ್ಟಡ ನವೀಕರಿಸಲಾಗುತ್ತದೆ. ಪ್ರಯಾಣಿಕರು ನಿಲ್ದಾಣದ ಒಳ ಪ್ರವೇಶ ಮತ್ತು ಹೊರ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿವಿಧ ಮಳಿಗೆ, ಚಿತ್ರಮಂದಿರ, ಜನರು ತಮ್ಮ ಫ್ರೀ ಟೈಮ್ ಕಳೆಯಲು ಅನುವಾಗುವಂತೆ ನಿಲ್ದಾಣವನ್ನು ಸಿಟಿ ಸೆಂಟರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ ರೈಲ್ವೆ ನಿಲ್ದಾಣದ ಆವರಣದ ಜಾಗವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, 2 ಏರ್ ಲೈನ್ಸ್ ಜೊತೆ ಮೀಟಿಂಗ್, ಜಿಲ್ಲೆಯಲ್ಲಿ ಟೂರಿಸಂ ರೋಡ್ ಶೋಗೆ ಪ್ಲಾನ್

CLICK HERE TO JOIN SHIVAMOGGA LIVE WHATSAPP GROUP



