WHATSAPP ಬಳಕೆದಾರರಿಗೆ ಸುಪ್ರೀಂ ಕೋರ್ಟ್‌ ಮಹತ್ವದ ಮೂರು ಸೂಚನೆ, ಏನದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 NOVEMBER 2023

TECH NEWS | ಡೀಆ್ಯಕ್ಟಿವೇಟ್ ಆಗಿರುವ ಸಿಮ್‌ಗಳನ್ನು ಹೊಸ ಗ್ರಾಹಕರಿಗೆ ವಿತರಿಸಲು ಸುಪ್ರೀಂಕೋರ್ಟ್‌ ಟೆಲಿಕಾಂ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಇನ್ನು, ಸಿಮ್‌ ಬಳಕೆದಾರರು ಮೊಬೈಲ್‌ ನಂಬರ್‌ ಬದಲಾವಣೆ ಮಾಡುವಾಗ ತಮ್ಮ ವಾಟ್ಸಪ್‌ ಡೇಟಾವನ್ನು ಡಿಲೀಟ್‌ ಮಾಡಬೇಕು. ಇದರಿಂದ ಡೇಟಾ ದುರ್ಬಳಕೆ ತಡೆಯಬಹುದು ಎಂದು ಎಚ್ಚರಿಸಿದೆ.

ಡೀಆ್ಯಕ್ಟಿವೇಟ್ ಆಗಿರುವ ನಂಬರ್‌ಗಳನ್ನು ಹೊಸ ಗ್ರಾಹಕರಿಗೆ ವಿತರಣೆ ಮಾಡಬಾರದು ಎಂದು ವಕೀಲರಾದ ರಾಜೇ‍ಶ್ವರಿ ಎಂಬುವವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ತಿರಸ್ಕರಿಸಿತು.

ಕೋರ್ಟ್‌ ಹೇಳಿದ 3 ಪ್ರಮುಖಾಂಶ

POINT-12017ರ ಏಪ್ರಿಲ್‌ನಲ್ಲಿ ದೂರಸಂಪರ್ಕ ಸಚಿವಾಲಯ ಗೈಡ್‌ಲೈನ್‌ ರೂಪಿಸಿದೆ. ಬಳಕೆಯಾಗದ ಮತ್ತು ಡೀಆ್ಯಕ್ಟಿವೇಟ್ ಆಗಿರುವ ಸಿಮ್‌ಗಳ ನಂಬರ್‌ಗಳನ್ನು ಹೊಸ ಗ್ರಾಹಕರಿಗೆ ಕೊಡಬಹುದು. ಡೀಆ್ಯಕ್ಟಿವೇಟ್ ಆಗಿ ಕನಿಷ್ಠ 90 ದಿನಗಳವರೆಗೆ ಹೊಸ ಗ್ರಾಹಕರಿಗೆ ಇಂತಹ ನಂಬರ್‌ ವಿತರಿಸಬಾರದು ಎಂಬ ನಿಯಮವಿದೆ. ದೂರಸಂಪರ್ಕ ಸಚಿವಾಲಯದ ನಿಯಮ ಹಳೆಯ ಗ್ರಾಹಕರ ಡೇಟಾ ಮತ್ತು ಖಾಸಗಿತನಕ್ಕೆ ಧಕ್ಕೆಯಾಗದಂತೆ ತಡೆಯುತ್ತದೆ.

POINT-2ಟೆಲಿಕಾಂ ಸಂಸ್ಥೆಗಳು ಮೊಬೈಲ್‌ ನಂಬರ್‌ಗಳು ಡೀಆ್ಯಕ್ಟಿವೇಟ್ ಆದ ತಕ್ಷಣಕ್ಕೆ ಹೊಸ ಗ್ರಾಹಕರಿಗೆ ನೀಡುತ್ತಿಲ್ಲ. 90 ದಿನದ ಬಳಿಕ ಹೊಸ ಗ್ರಾಹಕರಿಗೆ ನಂಬರ್‌ ಒದಗಿಸುತ್ತವೆ. ಇದು ಹಿಂದಿನ ಗ್ರಾಹಕ ತನ್ನ ಖಾಸಗಿತನ ಕಾಪಾಡಿಕೊಳ್ಳಲು ಹೇರಳ ಸಮಯ ಅವಕಾಶ ಕಲ್ಪಿಸಲಿದೆ.

POINT-3ಮೊಬೈಲ್‌ ನಂಬರ್‌ ಅಥವಾ ಸಿಮ್‌ ಬದಲಿಸುವ ಗ್ರಾಹಕರು ತಮ್ಮ ವಾಟ್ಸಪ್‌ ಡೇಟಾವನ್ನು ಡಿಲೀಟ್‌ ಮಾಡಬೇಕು. ಇದರಿಂದ ಬಳಕೆದಾರರ ಖಾಸಗಿತನಕ್ಕೆ ಯಾವುದೆ ಧಕ್ಕೆ ಉಂಟಾಗುವುದಿಲ್ಲ. ಸಿಮ್‌ ಬದಲಿಸುವ ಮುನ್ನ ಡೇಟಾ ಡಿಲೀಟ್‌ ಮಾಡುವುದು ಉತ್ತಮ.

ಇದನ್ನೂ ಓದಿ – ಇನ್ಮುಂದೆ ಒಂದೆ whatsappನಲ್ಲಿ ಎರಡು ಅಕೌಂಟ್‌ ಬಳಸಬಹುದು, ಹೇಗೆ? ಬರ್ತಿದೆ ಹೊಸ update

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment