ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 MAY 2023
SHIMOGA : ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ (Minister Post) ನೀಡಬೇಕು. ಈ ಸಂಬಂಧ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ತಾವು ಸಿದ್ಧ. ಒಂದು ವೇಳೆ ಸಚಿವ ಸ್ಥಾನ ಕೊಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಭದ್ರಾವತಿಯ ಕಾಂಗ್ರೆಸ್ ಮುಖಂಡರು, ಸಂಗಮೇಶ್ವರ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಬಲಿಗರು, ಈತನಕ ಕ್ಷೇತ್ರದ ಶಾಸಕರಾರೂ ಮಂತ್ರಿಯಾಗಿಲ್ಲ. ಈ ಬಾರಿ ಸಂಗಮೇಶ್ವರ ಅವರಿಗೆ ಸಚಿವರಾಗುವ ಅವಕಾಶವಿದೆ. ಹೈಕಮಾಂಡ್ ಸಚಿವ ಸ್ಥಾನ (Minister Post) ನೀಡಬೇಕು ಎಂದು ಆಗ್ರಹಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಂತ್ರಿಯಾಗುವ ಭರವಸೆಯಲ್ಲಿ ಮತ ನೀಡಿದ್ದಾರೆ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಷಡಾಕ್ಷರಿ ಮಾತನಾಡಿ, ಸಂಗಮೇಶ್ವರ ಅವರು ನಾಲ್ಕನೆ ಬಾರಿ ಶಾಸಕರಾಗಿದ್ದಾರೆ. ಪಕ್ಷದಲ್ಲಿ ಸೀನಿಯರ್ ಶಾಸಕರು. ಸಿದ್ದರಾಮಯ್ಯ ಅವರ ಸಂಗಮೇಶ್ವರ ಅವರನ್ನು ಗೆಲ್ಲಿಸಿ ಕಳುಹಿಸಿ. ಮಂತ್ರಿ ಮಾಡುವ ಜವಾಬ್ದಾರಿ ತಮ್ಮದು ಎಂದು ಹೇಳಿದ್ದರು. ಅದರಂತೆ ಸಂಗಮೇಶ್ವರ ಅವರು ಸಚಿವರಾಗುತ್ತಾರೆ ಎಂಬ ಭರವಸೆಯಲ್ಲಿ ಜನ ಮತ ನೀಡಿದ್ದಾರೆ. ತಾಲೂಕು, ಜಿಲ್ಲಾ ಪಂಚಾಯಿತಿ, ಎಂ.ಪಿ. ಚುನಾವಣೆಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರ ಪೈಕಿ ಯಾರಾಗ್ತಾರೆ ಮಿನಿಸ್ಟರ್?
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್ ಮಾತನಾಡಿ, ಬೇರೆಯವರ ಅಧಿಕಾರಿ ಕಸಿದು ನಮಗೆ ಸಚಿವ ಸ್ಥಾನ ನೀಡುವಂತೆ ನಾವು ಕೇಳುತ್ತಿಲ್ಲ. ಸಂಗಮೇಶ್ವರ ಅವರು ಜಿಲ್ಲೆಯ ಅನುಭವಿ ರಾಜಕಾರಣಿ. ಅಲ್ಲದೆ ನಮ್ಮ ಕ್ಷೇತ್ರಕ್ಕೆ ಅವಕಾಶ ಕೊಡಿ ಎಂದಷ್ಟೆ ಕೇಳುತ್ತಿದ್ದೇನೆ. ಈ ಹಿನ್ನೆಲೆ ಅಧಿವೇಶನ ಮುಗಿದ ಮೇಲೆ ಹೈಕಮಾಂಡ್ ಭೇಟಿ ಮಾಡಲಿದ್ದೇವೆ. ಸಂಗಮೇಶ್ವರ ಅವರು ಸಚಿವರಾದರೆ ಎಂಪಿಎಂ ಪುನಾರಂಭವಾಗಲಿದೆ. ವಿಐಎಸ್ಎಲ್ ಕಾರ್ಖಾನೆಗು ಅನುಕೂವಲಾಗಲಿದೆ. ಒಂದು ವೇಳೆ ಸಚಿವ ಸ್ಥಾನ ತಪ್ಪಿದರೆ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.ಸಚಿವ ಸ್ಥಾನ ಕೈತಪ್ಪಿದರೆ ಹೋರಾಟ
ಇದನ್ನೂ ಓದಿ – ಶಿವಮೊಗ್ಗಕ್ಕೆ ಸಿಗಲಿಲ್ಲ ಮೊದಲ ಪ್ರಾಶಸ್ತ್ಯ, ಮುನಿಸಿಕೊಂಡರಾ ಶಾಸಕ ಮಧು ಬಂಗಾರಪ್ಪ?
ಆರು ತಿಂಗಳಲ್ಲಿ ಎಂಪಿಎಂ ಪುನಾರಂಭ
ಕಾಂಗ್ರೆಸ್ ನಾಯಕ ರವಿಕುಮಾರ್ ಮಾತನಾಡಿ, ಈ ಬಾರಿ ಮಂತ್ರಿಗೆ ಮತ ನೀಡಿ ಎಂದು ಮತಯಾಚನೆ ಮಾಡಿದ್ದೇವೆ. ಸಂಗಮೇಶ್ವರ ಅವರಿಗೆ ಮಂತ್ರಿ ಸ್ಥಾನ ನೀಡಿದರೆ ಆರು ತಿಂಗಳಲ್ಲಿ ಎಂಪಿಎಂ ಪುನಾರಂಭ ಮಾಡಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಕ್ಷೇತ್ರದ ಶಾಸಕರು ಸಚಿವರಾಗಿದ್ದಾರೆ. ಆದರೆ ಭದ್ರಾವತಿ ಕ್ಷೇತ್ರದಲ್ಲಿ ಈತನಕ ಯಾರೊಬ್ಬರಿಗು ಸಚಿವ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಸಂಗಮೇಶ್ವರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಈ ಬಾರಿ ಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.