ಬೋರ್‌ವೆಲ್‌ ಕೊರೆಯುವಾಗ ಅಧಿಕಾರಿಗಳ ದಾಳಿ, ಎರಡು ವಾಹನಗಳು ವಶಕ್ಕೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 3 APRIL 2024

ANAVATTI : ಅನಧಿಕೃತವಾಗಿ ಬೋರ್‌ವೆಲ್‌ ಕೊರೆಯುತ್ತಿದ್ದ ಎರಡು ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸೊರಬ ತಾಲೂಕು ಆನವಟ್ಟಿ ಸಮೀಪದ ವೃತ್ತಿಕೊಪ್ಪ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಅನುಮತಿ ಪಡೆಯದೆ ಬೋರ್‌ವೆಲ್‌ ಕೊರೆಯಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ದಾಳಿ ನಡೆಸಲಾಗಿದೆ. ಬೋರ್‌ವೆಲ್‌ ಕೊರೆಯುವ ವಾಹನ ಮತ್ತು ಅದರ ಜೊತೆಗೆ ಮತ್ತೊಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅಂತರ್ಜಲ ನಿರ್ದೇಶನಾಲಯದ ಭೂ ವಿಜ್ಞಾನಿ ನಿರ್ಮಲನಾಥನ್‌, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎನ್‌.ರವೀಂದ್ರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್‌ ಅನ್ವೇಕರ್‌ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ – ಸೊರಬದಲ್ಲಿ ರಂಭಾಪುರಿ ಶ್ರೀ, ಆಂತರಿಕ ಬದುಕು ಪರಿಶುದ್ಧಿ ಕುರಿತು ಸಂದೇಶ, ಏನದು?

Leave a Comment